ಮೌಲ್ಯಯುತ ಸಂಸ್ಕಾರಯಕ್ತ ಶಿಕ್ಷಣ-ಶ್ರೀರಾಮ ವಿದ್ಯಾಕೇಂದ್ರ
Wednesday, May 27th, 2015
ಬಂಟ್ವಾಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಕಲ್ಲಡ್ಕ ಪರಿಸರದಲ್ಲಿ ಶ್ರೀರಾಮ ವಿದ್ಯಾಕೇಂದ್ರವು ೧೯೮೦ರಲ್ಲಿ ಆರಂಭಗೊಂಡಿತು. ಕೇವಲ ೭೩ ವಿದ್ಯಾರ್ಥಿಗಳಿಂದ ಆರಂಭಗೊಂಡ ವಿದ್ಯಾಸಂಸ್ಥೆಯಲ್ಲಿ ಇಂದು ೩೦೦೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಬಾಳ್ತಿಲ ಗ್ರಾಮದ ಹನುಮಾನ್ ನಗರದ ಪ್ರಶಾಂತ ಪರಿಸರದಲ್ಲಿ ವಿದ್ಯಾಕೇಂದ್ರವು ಶಿಶುಮಂದಿರದಿಂದ ಪದವಿ ತರಗತಿಗಳವರೆಗೆ ಪಠ್ಯದೊಂದಿಗೆ ಸಂಸ್ಕಾರಯುಕ್ತ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿಗಳ ಬಹುಮುಖ ಪ್ರತಿಭೆಗಳನ್ನು ಅರಳಿಸುವ ವಿವಿಧ ಚಟುವಟಿಕೆಗಳ ಮೂಲಕ ಜೀವನ ಮೌಲ್ಯ ಹಾಗೂ ರಾಷ್ಟ್ರೀಯ ಶಿಕ್ಷಣ ನೀಡುತ್ತಿದೆ. ವಿದ್ಯಾಕೇಂದ್ರವು ಶಾರೀರಿಕ, ಮಾನಸಿಕ, ಬೌದ್ಧಿಕವಾಗಿ ವಿಕಸಿತಗೊಂಡ ಯುವ ಪೀಳಿಗೆಯನ್ನು […]