ದಾದಿಯರೊಂದಿಗೆ ರಕ್ಷಾಬಂಧನ
Thursday, August 31st, 2023
ದಿನಾಂಕ 30.08.2023ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ದಾದಿಯರೊಂದಿಗೆ ಆಚರಿಸಲಾಯಿತು.ರಕ್ಷಾಬಂದನ ಎಂಬುದರ ತಾತ್ಪರ್ಯವೇನೆಂದರೆ ಪ್ರೀತಿಯ ಭಾವದಿಂದ ತನ್ನ ರಕ್ಷಣೆಯ ಜವಾಬ್ದಾರಿಯನ್ನು ಪರಸ್ಪರ ಹಂಚಿಕೊಳ್ಳುವುದು ಎಂದು ಹೇಳಬಹುದು. ಮನುಷ್ಯನು ತನ್ನ ಬದುಕಿನಲ್ಲಿ ಹಲವಾರು ವಸ್ತುಗಳ, ಸಂಬಂಧಗಳ ರಕ್ಷಣೆ ಮಾಡಬೇಕು. ಅದು ಹೆಚ್ಚಾಗಿ ಸ್ತ್ರೀ ಸಂಬಂಧಿತವಾದದ್ದು ಎನ್ನುವುದು ವಿಶೇಷ. ಇದರ ತಾತ್ಪರ್ಯವೇನೆಂದರೆ, ಸ್ತ್ರೀಯರು ಅಬಲರು ಎಂದಲ್ಲ, ಅವರ ರಕ್ಷಣೆ ನಮ್ಮ ಕರ್ತವ್ಯವೆಂದು. ಆದ್ದರಿಂದ ಪುರುಷನು ಭೂಮಿಯನ್ನು ತಾಯಿ ಎಂಬ ಭಾವದಿಂದ, ವಿದ್ಯೆಯನ್ನು ಸರಸ್ವತಿ […]