ಪೋಕ್ಸೋ ಕಾಯಿದೆ ಮಾಹಿತಿ

ಪೋಕ್ಸೋ ಕಾುದೆಯಡಿ ಯಾವುದೇ ವ್ಯಕ್ತಿ ಅಪ್ರಾಪ್ತ ಬಾಲಕಿಯ ಜೊತೆ ಅಸಭ್ಯವಾಗಿ ವರ್ತಿಸಿದರೆ, ಮಾನಸಿಕ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದರೆ ತಕ್ಷಣ ಪೊಲೀಸ್ ಠಾಣೆಗೆ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ದಾಖಲಿಸಿ. ಮಗುವಿಗೆ ದೌರ್ಜನ್ಯ ನಡೆದಿದ್ದರೂ ದೂರು ನೀಡದಿದ್ದಲ್ಲಿ ಸಂಬಂಧಪಟ್ಟ ಪೋಷಕರಿಗೆ ಫೋಕ್ಸೋ ಕಾುದೆಯಡಿ 6 ತಿಂಗಳ ನ್ಯಾಯಾಂಗ ಬಂಧನ ವಿಧಿಸಲಾಗುವುದು ಎಂದು ಬಂಟ್ವಾಳದ ವಕೀಲರಾದ ಸುದರ್ಶನ್ ಕುಮಾರ್ ಮಳಿಯರವರು ಹೇಳಿದರು.
ಇವರು ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದಲ್ಲಿ ನಡೆದ ಫೋಕ್ಸೋ ಕಾುದೆ ಮಾಹಿತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ ಈ ಕಾುದೆಯು ಮಗುವಿನ ಪರವಾಗಿರುವುದರಿಂದ ಭವಿಷ್ಯದಲ್ಲಿ ಮಗುವಿಗೆ ತೊಂದರೆಯಾಗದಂತೆ ಗೌಪ್ಯವಾಗಿ ತನಿಖೆ ನಡೆಸುವುದರಿಂದ ಪೋಷಕರು ಆತಂಕಪಡುವ ಅಗತ್ಯವಿಲ್ಲ ಹಾಗೂ ವ್ಯಕ್ತಿುಂದ ಅಥವಾ ಮಾಧ್ಯಮದಿಂದ ಬಹಿರಂಗವಾದಲ್ಲಿ ಫೋಕ್ಸೋ ಕಾುದೆಯಡಿ 6 ತಿಂಗಳು ನ್ಯಾಯಾಂಗ ಬಂಧನ ಅನುಭವಿಸಬೇಕಾಗುತ್ತದೆ. ಆದುದರಿಂದ ಪೋಷಕರು ಹಾಗೂ ನಾಗರಿಕರು ನಿರ್ಭಯದಿಂದ ಇಂತಹ ಪೈಶಾಚಿಕ ಕೃತ್ಯವನ್ನು ತಡೆಯಲು ಸಹಕರಿಸಬೇಕು ಎಂದು ನುಡಿದರು.

Leave a Reply