ವೇದವ್ಯಾಸಧ್ಯಾನಮಂದಿರ, ಕಾರ್ಯಾಲಯ ಮತ್ತು ಕೊಠಡಿಗಳ ಉದ್ಘಾಟನೆ ದಿನಾಂಕ: 21.11.2018
ದೇವಸ್ಥಾನಕ್ಕೆ ಪ್ರವೇಶ ಮಾಡಿದ ಅನುಭವವನ್ನು ನೀಡಿತು – ಉಲ್ಲಾಸ್ ಕಾಮತ್, ಜ್ಯೋತಿ ಲ್ಯಾಬೋರೇಟರೀಸ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕರು ಮುಂಬು

ದಿನಾಂಕ ೨೧.೧೧.೨೦೧೮ ರಂದು ಶ್ರೀರಾಮ “ದ್ಯಾಕೇಂದ ್ರಕಲ್ಲಡ್ಕದ ಪ್ರಾಥ”ುಕ “ಭಾಗದಲ್ಲಿ ವೇದವ್ಯಾಸಧ್ಯಾನ ಮಂದಿರ, ಕಾರ್ಯಾಲಯ ಮತ್ತು ಕೊಠಡಿಗಳ ಶುಭಾರಂಭ ಕಾರ್ಯಕ್ರಮವು ನಡೆುತು.
ಅತಿಥಿಗಳು ಮೊದಲು ಹೊಸದಾಗಿ ಪ್ರಾರಂಭಗೊಂಡ ಕಟ್ಟಡಗಳಿಗೆ ಭೇಟಿ ನೀಡಿ ಬೇರೆ ಬೇರೆ ರೀತಿಯಲ್ಲಿ ಕಟ್ಟಡಗಳನ್ನು ಶುಭಾರಂಭಗೊಳಿಸಿದರು.
ಮುಖ್ಯೋಪಾಧ್ಯಾಯರ ಕೊಠಡಿ ಮತ್ತು ಕಾರ್ಯಾಲಯ ‘ಭುವನೇಶ್ವರಿ’ ಕೊಠಡಿಯನ್ನು ಭಾರತಿ ಪಾಟೀಲ್‌ರವರ ಕೊಠಡಿಯ ಬಾಗಿಲು ತೆರೆದು ಕನ್ನಡದ ಧ್ವಜವನ್ನು ತಾು ಭುವನೇಶ್ವರಿಗೆ ನೀಡುವುದರ ಮೂಲಕ ಉದ್ಘಾಟಿಸಿದರು. ಅಧ್ಯಾಪಕರ ಕೊಠಡಿ ‘ಅರುಂಧತೀ’ಯನ್ನು ಸ”ತಾ ಮಾಯಣ್ಣಗೌಡ ಇವರು ಘೃತಾಹುತಿ ಮಾಡುವುದರ ಮೂಲಕ, ನಂತರ ‘”ದ್ಯಾವತಿ’ ಕೊಠಡಿಯನ್ನು ಭಾರತ ಮಾತೆಗೆ ಕ್ಷೀರಾಭಿಷೇಕ ಮಾಡುವುದರ ಮೂಲಕ ಭವರ್‌ಲಾಲ್ ಆರ್ಯರವರು ಉದ್ಘಾಟಿಸಿದರು. “ಜಯೇಂದ್ರ ಭಟ್ ಇವರು ಭಾರತ ಶ್ರೇಷ್ಠ ಗ್ರಂಥವಾದ ಭಾಮತೀ ಗ್ರಂಥವನ್ನು ತೆರೆಯುವುದರ ಮೂಲಕ, ನಂತರ ಸೋಮಶೇಖರ ನಾರ್ವೆ ಇವರು ಕೌಸಲ್ಯ, ರಾಮ, ಲಕ್ಷ್ಮಣ ಸಮೇತರಾಗಿದ್ದ ರಾಮನ ಮೂರ್ತಿಗೆ ಆರತಿ ಬೆಳಗುವುದರ ಮೂಲಕ ಕೌಸಲ್ಯ ತರಗತಿ ಕೊಠಡಿಗೆ ಚಾಲನೆ ನೀಡಿದರು.
ಸುನಿಲ್ ಬಾಳಿಗ ಇವರು ಸಂಸ್ಕೃತದ ಮಹಾನ್ “ದ್ವಾಂಸರಾದ ಪಾಣಿನಿ ರಚಿಸಿದ ಬೇರೆ ಬೇರೆ ಗ್ರಂಥಗಳಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಪಾಣಿನಿ ಕೊಠಡಿಯನ್ನು ಶುಭಾರಂಭಗೊಳಿಸಿದರು. ದಧೀಚಿ ತರಗತಿ ಕೊಠಡಿಯನ್ನು ಮುತ್ತಣ್ಣ ಬಳ್ಳಾರಿ ರವರು ದಧೀಚಿ ಮರ್ಹಯ ಭಾವಚಿತ್ರಕ್ಕೆ ಹೂ”ನ ಹಾರ ಹಾಕುವುದರ ಮೂಲಕ ಚಾಲನೆ ನೀಡಿದರು.
ವೇದವ್ಯಾಸಧ್ಯಾನ ಮಂದಿರವನ್ನು ಉಲ್ಲಾಸ್ ಕಾಮತ್ ಇವರು ಘಂಟಾನಾದ ಮಾಡಿ ಪರದೆ ಸರಿಸುವ ಮೂಲಕ ಉದ್ಘಾಟಿಸಿದರು. ನಂತರ ಪದ”ಪೂರ್ವ “ದ್ಯಾರ್ಥಿಗಳಿಂದ ನವಶಕ್ತಿ ವೈಭವ ಎಂಬ ನೃತ್ಯರೂಪಕವು ಮೂಡಿ ಬಂದಿತು.
“ವೇಕಾನಂದ “ದ್ಯಾವರ್ಧಕ ಸಂಘದ ಅಧ್ಯಕ್ಷರು ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಇವರು ತಮ್ಮ ಸ್ವಾಗತ ಪರಿಚಯದಲ್ಲಿ ಮಾತೃಭಾಷೆಯಲ್ಲಿ ಸಂಸ್ಕಾರ ಭರಿತ ಶಿಕ್ಷಣವನ್ನು ನೀಡುವುದು ನಮ್ಮ ದೇಶದ ಪದ್ಧತಿಯಾಗಿತ್ತು. ಇದನ್ನು ನಮ್ಮ ಸಂಸ್ಥೆಯು ನಡೆಸಿಕೊಂಡು ಬರುತ್ತಿದೆ ಎಂದು ಹೇಳುತ್ತಾ ಆಗ”ುಸಿದ ಎಲ್ಲಾ ಅತಿಥಿಗಳನ್ನು ಪರಿಚುಸಿ ಸ್ವಾಗತಿಸಿದರು.
ಉಲ್ಲಾಸ್ ಕಾಮತ್ ಜ್ಯೋತಿ ಲ್ಯಾಬೋರೇಟರೀಸ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕರು ಮುಂಬು ಇವರು ದೀಪ ಬೆಳಗಿಸುವುದರ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ನಾನು ಹಲವಾರು “ದ್ಯಾಸಂಸ್ಥೆಗಳಿಗೆ ಭೇಟಿ ನೀಡಿದ್ದೇನೆ, ಆದರೆ ಇಂತಹ ಒಂದು “ದ್ಯಾಸಂಸ್ಥೆಯನ್ನು ಎಲ್ಲೂ ನೋಡಿಲ್ಲ. ಇಲ್ಲಿನ ಶಿಸ್ತು, ಸೂಕ್ಷ್ಮತೆ ಎಲ್ಲವೂ ದೇವಸ್ಥಾನಕ್ಕೆ ಪ್ರವೇಶ ಮಾಡಿದ ಅನುಭವವನ್ನು ನೀಡಿತು ಎಂದು ಹೇಳಿದರು.
ಸುನಿಲ್ ಬಾಳಿಗ ಇವರು ನಾನು ಇಲ್ಲಿಗೆ ಅತಿಥಿಯಾಗಿ ಬಂದು ನಾನು ಇಲ್ಲಿಂದ ಒಬ್ಬ “ದ್ಯಾರ್ಥಿಯಾಗಿ ತೆರಳುತ್ತಿದ್ದೇನೆ ಅಂತಹ ಒಂದು ಅನುಭವವನ್ನು ಈ “ದ್ಯಾಸಂಸ್ಥೆ ನೀಡಿತು ಎಂದು ಹರ್ಷ ವ್ಯಕ್ತಪಡಿಸಿದರು.
ಭಾರತಿ ಪಾಟೀಲ್ ಸಾಮಾಜಿಕ ಕಾರ್ಯಕರ್ತರು ಹುಬ್ಬಳ್ಳಿ, ಇವರು ಮಾತನಾಡಿ ಇಲ್ಲಿ ನಡೆಯುತ್ತಿರುವ ನಮ್ಮತನದ ಶಿಕ್ಷಣ ವ್ಯವಸ್ಥೆಯು ನನಗೆ ಹೊಸ ಲೋಕಕ್ಕೆ ಪ್ರವೇಶ ಮಾಡಿದ ಅನುಭವವನ್ನು ಕೊಟ್ಟಿತು. ಮುಂದೆ ಈ ಸಂಸ್ಥೆಯು ರಾಮರಾಜ್ಯವಾಗಿ ಮೂಡಿಬರಲಿ ಎಂದು ಆಶಿಸಿದರು.
ಸ”ತಾ ಮಾಯಣ್ಣಗೌಡ ಮಹಾನಗರ ಪಾಲಿಕೆ ಸದಸ್ಯರು ಬೆಂಗಳೂರು ಇವರು ಸಂಘ ಪ್ರೇರಣೆಯಲ್ಲಿ ನಡೆಯುತ್ತಿರುವ ಈ ಶಿಕ್ಷಣ ವ್ಯವಸ್ಥೆಯು ನಮ್ಮ ವ್ಯಕ್ತಿತ್ವ “ಕಸನಕ್ಕೆ ದಾರಿಮಾಡಿಕೊಡುತ್ತದೆ ಎಂದರು.
ಭವರ್‌ಲಾಲ್ ಆರ್ಯ ರಾಜ್ಯ ಮುಖ್ಯಸ್ಥರು ಪತಂಜಲಿ ಯೋಗ ಪೀಠ – ಕರ್ನಾಟಕ ಇವರು ಉನ್ನತರಾಷ್ಟ್ರವನ್ನು ನಿರ್ಮಾಣ ಮಾಡಿ ಭಾರತವನ್ನು “ಶ್ವಗುರು ಮಾಡುವ ಕಾರ್ಯದತ್ತ ಹೆಜ್ಜೆ ಹಾಕುತ್ತಿರುವ ಕಾರ್ಯದಲ್ಲಿ ತೊಡಗಿರುವ ಈ “ದ್ಯಾಸಂಸ್ಥೆಯು ಮುಂದೆ ಇನ್ನಷ್ಟು ಮಾನ್ಯತೆಯನ್ನು ಪಡೆಯಲಿ, ಇಲ್ಲಿ ನಡೆಯುವ ಶೈಕ್ಷಣಿಕ ಚಟುವಟಿಕೆಯನ್ನು “ಕ್ಷಿಸಲು ನಮ್ಮ ದೇಶದ ಶ್ರೇಷ್ಠ ಯೋಗ ಗುರುಗಳಾದ ರಾಮ್‌ದೇವ ಬಾಬರವರನ್ನು ಇಲ್ಲಿಗೆ ಕರೆತರುವುದಾಗಿ ಭರವಸೆ ನೀಡಿದರು.
ಸೋಮಶೇಖರ ನಾರ್ವೆ ಇವರು ಈ “ದ್ಯಾಸಂಸ್ಥೆಗೆ ಮಕ್ಕಳನ್ನು ಕಳಿಸುತ್ತಿರುವ ಪೋಷಕರು ಪುಣ್ಯವಂತರು ಎಂದು ಹೇಳಿದರು. “ದ್ಯಾಕೇಂದ್ರದ ಸಂಚಾಲಕರಾದ ಶ್ರೀಯುತ ವಸಂತ ಮಾಧವ ಇವರು ಧನ್ಯವಾದಗೈದು, ರಾಜೇಶ್ವರಿ ಮಾತಾಜಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾುತು.

Leave a Reply