ಧರ್ಮದ ತಳಹದಿಯಲ್ಲಿ ಧರ್ಮಾಧಾರಿತ ಚಾರಿತ್ರ್ಯವಂತರಾಗಿ ಮಕ್ಕಳನ್ನು ಬೆಳೆಸುವ ಕಾರ್ಯ ಶಿಕ್ಷಕರಿಂದ ಆಗಬೇಕು. ಮಗುವಿನ ತಾಯಿ ತಂದೆಯಂತೆ ಶಿಕ್ಷಕರು ಕಾರ್ಯ ನಿರ್ವಹಿಸಬೇಕು. ಮಗುವಿನ ಗುಣನಡವಳಿಕೆ ಬೆಳೆಸುವಲ್ಲಿ ಗುರುವೃಂದ ಕರ್ತವ್ಯ ನಿರ್ವಹಿಸಬೇಕು. ಗುರುಧರ್ಮವನ್ನು ಪಾಲಿಸಿದರೆ ಕಾನೂನಿನ ಅವಶ್ಯಕತೆ ಇರುವುದಿಲ್ಲ. ಮಕ್ಕಳ ದೃಷ್ಟಿಕೋನವನ್ನು ನೈತಿಕವಾಗಿ, ಸಮಾಜಮುಖಿಯಾಗಿ ಬದಲಾಯಿಸುವ ಮೂಲಕ ಸುಶಿಕ್ಷಿತ ಸಮಾಜವನ್ನು ನಿರ್ಮಾಣ ಮಾಡುವ ಜವಾಬ್ಧಾರಿ ಶಿಕ್ಷಕರಿಗಿದೆ . – ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ|| ಪ್ರಭಾಕರ ಭಟ್ ಹೇಳಿದರು.
ಚಿಕ್ಕ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಸಿಕ್ಕಿದಾಗ ಯಾವುದೇ ದೌರ್ಜನ್ಯ ನಡೆಯಲು ಸಾಧ್ಯವಿಲ್ಲ ವಿದ್ಯಾರ್ಥಿಗಳನ್ನು ಗಮನಿಸಿ ಶಿಕ್ಷಕರು ಮಾರ್ಗದರ್ಶನ ನೀಡಬೇಕು ಮಕ್ಕಳಿಗೆ ಯಾವುದೇ ಕಿರುಕುಳವಾದರೂ ದೂರು ನೀಡುವ ಮೂಲಕ ಕಾನೂನು ಕ್ರಮ ಕೈಗೊಳ್ಳಬೇಕು. ಗೌ/ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ಸಿ ಬಂಟ್ವಾಳ ಹಾಗೂ ತಾಲೂಕು ಕಾನೂನು ಸೇವೆಗಳ ಅಧ್ಯಕ್ಷ ಚಂದ್ರಶೇಖರ ಯುನ್ಯಾಯಾಧೀಶ ಮತ್ತು ಜೆಎಂಎಫ್ಸಿ ಬಂಟ್ವಾಳ ಹಾಗೂ ತಾಲೂಕು ಕಾನೂನು ಸೇವೆಗಳ ಅಧ್ಯಕ್ಷ ಚಂದ್ರಶೇಖರ ಯು ಎಂದು ಹೇಳಿದರು.