ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಭಾರತೀಯ ಭೌತಶಾಸ್ತ್ರಜ್ಞ ಸರ್ ಸಿ.ವಿ ರಾಮನ್ರವರು ಆವಿಷ್ಕರಿಸಿದ ರಾಮನ್ ಪ್ರಭಾವದ ದಿನವನ್ನು ಗುರುತಿಸುವ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಒಂದು ವಾರಗಳ ಕಾಲ ಜ್ಞಾನಧಾರ ಸಪ್ತಾಹ ಎಂಬ ಕಾರ್ಯಕ್ರಮದಡಿಯಲ್ಲಿ ನಡೆಸಿ ದಿನಾಂಕ 28.02.2022 ರಂದು ಸಮಾರೋಪ ಕಾರ್ಯಕ್ರಮ ನಡೆಸಲಾಯಿತು.
ಬಂದತಂಹ ಅಥಿತಿಗಳಿಗೆ ಅಡಿಕೆ ಗಿಡಗಳನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಶ್ರೀರಾಮ ವಿದ್ಯಾಕೇಂದ್ರದ ವತಿಯಿಂದ ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕರವರನ್ನು ಗೌರವಿಸಲಾಯಿತು.ಪದ್ಮಶ್ರೀ ಶ್ರೀ ಅಮೈ ಮಹಾಲಿಂಗ ನಾಯ್ಕ ಇವರು ಮಾತನಾಡುತ್ತಾ ಶಾಲಾ ಚಟುವಟಿಕೆಗಳು ನಿಜವಾಗಿ ಅತ್ಯದ್ಭುತವಾಗಿದೆ ಎಲ್ಲಾ ವಿದ್ಯಾರ್ಥಿಗಳು ಕೂಡಾ ಪರಿಸರವನ್ನು ಪ್ರೀತಿಸಬೇಕು ಮತ್ತು ಪ್ರತಿಯೊಂದು ಮಗು ಕೂಡಾ ಪರಿಸರಕ್ಕೆ ಒಂದು ವಿಜ್ಞಾನಿಯೇ ಆಗಿದೆ. ಈ ರೀತಿಯ ಶಿಕ್ಷಣವನ್ನು ಪಡೆಯುವ ನಿಜಕ್ಕೂ ನೀವು ಭಾಗ್ಯವಂತರು ಎನ್ನುತ್ತ ತಾನು ಸುರಂಗ ಅಗೆದ ಸಾಹಸದ ಕಥೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಇವರು ಮಾತಾಡಿ ಮಹಾಲಿಂಗ ನಾಯ್ಕರ ಸಾಧನೆ ನಿಜಕ್ಕೂ ಒಂದು ಅತ್ಯದ್ಭುತ. ವಿದ್ಯಾರ್ಥಿಗಳಲ್ಲಿ ಕುತೂಹಲ ಸಾಮಾನ್ಯ ವಿಷಯ ಅದರೆ ಅದಕ್ಕೆ ಬೇಕಾದ ಸಾಧನೆಯನ್ನು ಮಾಡಿದಾಗ ಸಫಲತೆಯನ್ನು ಕಾಣಲು ಸಾಧ್ಯ ಅಧ್ಯಾಪಕರಾದವರು ವಿದ್ಯಾರ್ಥಿಗಳ ಕೌತುಕಕ್ಕೆ ಸಮರ್ಥವಾಗಿ ಉತ್ತರಿಸುವ ಕೌಶಲ ಬೆಳಸಿಕೊಳ್ಳಬೇಕು. ಸಿ ವಿ ರಾಮನ್ರವರು ಒರ್ವ ಅತ್ಯದ್ಭುತ ವಿಜ್ಞಾನಿ. ನಿರಂತರ ಅನ್ವೇಷಣೆಯೆನ್ನುವುದೇ ನಿಜವಾದ ವಿಜ್ಞಾನ. ಎಂದು ತಮ್ಮ ಪ್ರಸ್ತಾವಿಕ ನುಡಿಗಳನ್ನಾಡಿದರು. ೫ನೇ ತರಗತಿಯ ವೈಷ್ಣವಿ ಕಡ್ಯ ‘ವಿಜ್ಞಾನ ಮತ್ತು ಭಾರತೀಯ ಸಂಪ್ರದಾಯ’ ಎನ್ನುವ ವಿಷಯದ ಬಗ್ಗೆ ಮಂಡಿಸಿದಳು.ಕಾರ್ಯಕ್ರಮದಲ್ಲಿ ಹದಿನೈದು ತಳಿಗಳ ೧೦೦ ಬಾಳೆಗೊನೆಗಳ ಪ್ರದರ್ಶನ, ತಿನ್ನಲು ಯೋಗ್ಯವಾದ ಕಾಡು ಹಣ್ಣುಗಳ ಪ್ರದರ್ಶನ, ಔಷದಿ ಸಸ್ಯಗಳ ಪರಿಚಯದೊಂದಿಗೆ ಸರಿ ಸುಮಾರು ೧೦೦ ಜಾತಿಗೆ ಸೇರಿದ ಹೂಗಳು ಹತ್ತಾರು ದವಸ ಧಾನ್ಯಗಳು ಹಾಗೂ ತರಕಾರಿಗಳು ವಿವಿಧ ಬಗೆಯ ಏಳನೀರು ಇವುಗಳ ಪ್ರದರ್ಶನ ಮತ್ತು ಮಾಹಿತಿಯನ್ನು ವಿದ್ಯಾರ್ಥಿಗಳು ನೀಡಿದರು. ಈ ಎಲ್ಲಾ ಪ್ರದರ್ಶನಗಳನ್ನು ಇತರ ಶಾಲೆಯವರು ಕೂಡ ಆಗಮಿಸಿ ವೀಕ್ಷಿಸಿರುವುದು ಗಮನಾರ್ಹ ಇದರೊಂದಿಗೆ ವಿಜ್ಞಾನ ಮೇಳದಲ್ಲಿ ಕಸ್ಕಸ್ , ಪುನರ್ಪುಳಿ, ಕರಿಮೆಣಸು , ಮಿಡಿಮಾವು, ದಾಸವಾಳ, ಅನನಾಸು, ಹೀಗೆ ವಿವಿಧ ಬಗೆಯ ಆರ್ಯವೇದ ಪಾನೀಯಗಳನ್ನು ವಿದ್ಯಾರ್ಥಿಗಳೇ ತಯಾರಿಸಿ ವಿತರಿಸಿದರು. ಈ ಎಲ್ಲಾ ವಸ್ತುಗಳನ್ನು ವಿದ್ಯಾರ್ಥಿಗಳೇ ಪೋಷಕರ ಸಹಕಾರರದೊಂದಿಗೆ ಸಂಗ್ರಹಿಸಿ ತಂದಿರುವುದು ವಿಶೇಷವಾಗಿತ್ತು. ಮಕ್ಕಳಿಂದ ವಿವಿಧ ವಿಜ್ಞಾನ ಮಾದರಿಗಳ ಪ್ರದರ್ಶನ ನಡೆಯಿತು.. ವಿಜ್ಞಾನ ಮೇಳದಲ್ಲಿ ವಿವಿಧ ಸ್ಪರ್ದೆಗಳನ್ನು ಏರ್ಪಡಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.ವೇದಿಕೆಯಲ್ಲಿ, ಗೌರವ ಉಪಸ್ಥಿತರಾಗಿ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ, ಕಾಂಪ್ರಬೈಲು ಶ್ರೀಉಳ್ಳಾಲ್ತಿ ಅಮ್ಮನವರ ಕ್ಷೇತ್ರ, ಶ್ರೀ ಜಯಾನಂದ ಆಚಾರ್ಯ, ವಿಟ್ಲ ಅರಸು ಮನೆತನದ ಶ್ರೀ ಕೃಷ್ಣಯ್ಯ ಕೆ, ನ್ಯಾಯವಾದಿ ಹಾಗೂ ನೋಟರಿ ಬಿಸಿ ರೋಡ್ ಶ್ರೀ ಜಯರಾಮ ರೈ, ಇತಿಹಾಸ ಉಪನ್ಯಾಸಕರು ಹಾಗೂ ವಿಟ್ಲ ರೋಟರಿ ಘಟಕದ ಅಧ್ಯಕ್ಷರಾದ ಶ್ರೀ ಅಣ್ಣಪ್ಪ ಶಾಸ್ತಾನ, ವಿಟ್ಲ ವಿದ್ಯಾಪೋಷಕ ಸಮಿತಿಯ ಅಧ್ಯಕ್ಷರಾದ ಬಾಬು ಕೆ ವಿ, ದಕ್ಷಿಣ ಪ್ರಾಂತ ಮಾತೃಸೇವಿಕಾ ಸಮಿತಿಯ ಕಾರ್ಯಕಾರಿಣಿ ಸದಸ್ಯೆ ಡಾ. ಕಮಲಾ ಪ್ರಭಾಕರ ಭಟ್, ಆಡಳಿಮಂಡಳಿಯ ಸದಸ್ಯೆ ಶ್ರೀಮತಿ ಮಲ್ಲಿಕಾ ಶೆಟ್ಟಿ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.