ಶ್ರೀರಾಮ ಪ್ರೌಢಶಾಲೆಯಲ್ಲಿ ಅಂತರ್ಜಾಲ ಪ್ರಪಂಚ ಕಾರ್ಯಕ್ರಮ
8ನೇ ತರಗತಿಯ ವಿದ್ಯಾರ್ಥಿಗಳಿಗೆ ಅಂತರ್ಜಾಲ ಶಿಕ್ಷಣದ ಪ್ರಾಮುಖ್ಯತೆ ಹಾಗೂ ಉಪಯೋಗ ತಿಳಿಸುವ ಕಾರ್ಯಕ್ರಮ. ಹತ್ತಿರದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಒಟ್ಟು ನಾಲ್ಕು ದಿವಸ ಈ ಕಾರ್ಯಕ್ರಮ ನಡೆಯಲಿದೆ.
ಅಂತರ್ಜಾಲದಲ್ಲಿ ಅನೇಕ ವಿಷಯಗಳು ನಮಗೆ ದೊರೆಯುತ್ತದೆ. ಆದರೆ ನಾವು ನಮ್ಮ ಶಿಕ್ಷಣಕ್ಷೆ ಸಂಬಂಧಿಸಿ ವಿಷಯಗಳು ಹಾಗೂ ಇ-ಲೈಬ್ರೇರಿಯ ಮೂಲಕ ವಿವಿಧ ರೀತಿಯ ಪುಸ್ತಕಗಳನ್ನು ತೆರೆದು ಓದುವುದು ಉತ್ತಮ ಎಂದು ದಿನಾಂಕ 25.2.2016ರಂದು ಬೆಳಿಗ್ಗೆ ಶ್ರೀರಾಮ ವಿದ್ಯಾಕೇಂದ್ರದದಲ್ಲಿ ನಡೆದ ವಿದ್ಯಾರ್ಥಿ ಅಂತರ್ಜಾಲ ಪ್ರಪಂಚ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಣಾಧಿಕಾರಿ ವಸಂತ ಮಾಧವ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಶ್ರೀ ರಮೇಶ್ ಎನ್, ಬಾಳ್ತಿಲ ಶಾಲೆಯ ಶಿಕ್ಷಕಿ ಕ್ಷಮಾ, ಗೋಳ್ತಮಜಲು ಶಾಲೆಯ ಶಿಕ್ಷಕಿ ಮ್ಯಾಗ್ನೆಟ್ ಮೆರ್ಲಿನ್ ಡಿಸೋಜ, ಕಲ್ಲಡ್ಕ ಮಾದರಿ ಶಾಲೆಯ ಶಿಕ್ಷಕಿ ಸಂಗೀತ ಇವರು ಉಪಸ್ಥಿತರಿದ್ದರು.
ಗಣಕ ಶಿಕ್ಷಕ ಶ್ರೀ ಕುಶಾಲಪ್ಪ ಕಾರ್ಯಕ್ರಮವನ್ನು ಸಂಯೋಜಿಸಿದರು. ಕಾರ್ಯಕ್ರಮದಲ್ಲಿ ಬಾಳ್ತಿಲ, ಗೋಳ್ತಮಜಲು ಮತ್ತು ಕಲ್ಲಡ್ಕ ಮಾದರಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.