gopooje

ಅ: 26 : ಶ್ರೀರಾಮ ವಿದ್ಯಾಕೇಂದ್ರದಲ್ಲಿ ಗೋಪೂಜೆ, ನೂತನ ಶಿಶುಮಂದಿರ ಕುಟೀರ ಉದ್ಘಾಟನೆ ಹಾಗೂ ಮಹೇಂದ್ರ ಕಟ್ಟಡದ ಶಿಲಾನ್ಯಾಸ
ಶ್ರೀರಾಮ ವಿದ್ಯಾಕೇಂದ್ರದ ಕಲ್ಲಡ್ಕದ ವಸುಧಾರ ಗೋಶಾಲೆಯಲ್ಲಿ ಗೋವುಗಳಿಗೆ ಹೂಮಾಲೆ ಹಾಕಿ ಆರತಿ ಮಾಡಿ ಗೋಪೂಜೆ ಮಾಡಲಾಯಿತು.
ನೂತನವಾಗಿ ನಿರ್ಮಾಣಗೊಂಡ ’ಸೀತಾ’ ಶಿಶುಮಂದಿರ ಕಟ್ಟಡವನ್ನು ಖ್ಯಾತ ಚಿತ್ರ ನಟಿ ಶ್ರೀಮತಿ ಅಮೂಲ್ಯ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಇವರು ಈ ವಿದ್ಯಾಕೇಂದ್ರಕ್ಕೆ ನನಗೆ ಬರುವುದಕ್ಕೆ ಅವಕಾಶ ದೊರಕಿದ್ದು ತುಂಬಾ ಸಂತೋಷವಾಗಿದೆ. ಇಲ್ಲಿನ ವಿದ್ಯಾರ್ಥಿಗಳನ್ನು ಕಂಡಾಗ ನನಗೆ ತುಂಬಾ ಹೆಮ್ಮೆ ಅನಿಸಿದೆ. ಇಲ್ಲಿ ಕಲಿಸಿರುವ ಸಂಸ್ಕಾರ ಸಂಸ್ಕೃತಿಗಳನ್ನು ಇನ್ನು ಮುಂದೆಯೂ ಬೆಳೆಸಿ ಉಳಿಸಿಕೊಳ್ಳಬೇಕು ಎಂದರು. ಇಂತಹ ಶಿಕ್ಷಣ ಸಂಸ್ಥೆಗಳನ್ನು ಇಲ್ಲಿ ಮಾತ್ರವಲ್ಲದೇ ಬೆಂಗಳೂರುಗಳಲ್ಲಿ ಮಾಡಬೇಕು ಎಂದು ವಿನಂತಿಸಿಕೊಂಡರು.
ನಂತರ ಪ್ರಾಥಮಿಕ ಶಾಲೆಯ ಮಹೇಂದ್ರ ಕಟ್ಟಡ ಇದರ ಶಿಲಾನ್ಯಾಸವನ್ನು ಜಿ. ವೇಲು, ಲಹರಿ ಆಡಿಯೋ ಕಂಪೆನಿ, ಬೆಂಗಳೂರು ಇವರು ಮಾಡಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಾ. ಪ್ರಭಾಕರ ಭಟ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾಕೇಂದ್ರ ಬೆಳೆದು ಬಂದ ರೀತಿ ಹಾಗೂ ಇಲ್ಲಿನ ಶಿಕ್ಷಣ ಪದ್ದತಿಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ತಂತ್ರಿಗಳು, ಮೈಸೂರು, ನಾರಾಯಣ ಗೌಡ ಮೈಸೂರು ಹೊಟೇಲ್ ಮ್ಹಾಲಕರ ಸಂಘದ ಅಧ್ಯಕ್ವ., ಶಾಂತ ಕುಮಾರ ತಿಪಟೂರು, ಮುರುಳಿ ಮೋಹನ್ ಸಕಲೇಶಪುರ, ಹಾಸನ ಜಿಲ್ಲಾ ಎಸ್.ಸಿ. ಮೋರ್ಚಾದ ಅಧ್ಯಕ್ಷರು, ಗಿರೀಶ್ ಕುಮಾರ್ ವಕೀಲರು ಸಕಲೇಶಪುರ, ಹಿತೇಶ್ ಬಿಜೆಪಿ ಮುಖಂಡರು, ಸಕಲೇಶಪುರ, ಹೆಮಂತ್ ಬಿಜೆಪಿ ಮುಖಂಡರು ಸಕಲೇಶಪುರ, ಪ್ಲಥ್ವಿ, ಸಾಮಾಜಿಕ ಜಾಲತಾಣದ ಸಕಲೇಶಪುರ ಸಂಚಾಲಕರು, ಶ್ರೀಮತಿ ಸುನಿತಾ ಮಂಜುನಾಥ್ ಹೆಬ್ಬಾಳ ಕ್ಷೇತ್ರದ ಮಹಿಳಾ ಮೋರ್ಚ ಅಧ್ಯಕ್ಷರು, ಶ್ರೀ ಬಾಲಚಂದ್ರ ಎಸ್. ಪಾಟೀಲ ಬ್ಯಾಡಗಿ ಕ್ಷೇತ್ರದ ಬಿಜಿಪಿ ಮುಖಂಡರು, ಶಿವಯೋಗಿ ಶಿರೂರು, ಜಗದೀಶ್, ರಾಮಚಂದ್ರ ಜಿ.ಹೆಚ್, ಮಹೇಂದ್ರ ನಾಯ್ಕ್, ದಿನಕರ ಜೋಶಿ ದಾರಾವಾಡ, ಶಿವು ಹಿರೇಮಠ್, ಸುನಿಲ್ ಕುಲಕರ್ಣಿ, ಮಂಗಳೂರು, ಹಾಗೂ ವಿದ್ಯಾಕೇಂದ್ರದ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ , ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯರು, ಶಿಶುಮಂದಿರ ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಕಾರ‍್ಯಕ್ರಮವನ್ನು ಆಶಾ ಪ್ರಸಾದ್ ರೈ ಸ್ವಾಗತಿಸಿ, ಮಲ್ಲಿಕಾ ಶೆಟ್ಟಿ ವಂದಿಸಿದರು. ವಾರಿಜ ಕಾರ‍್ಯಕ್ರವನ್ನು ನಿರೂಪಿಸಿದರು.

Leave a Reply