ಧನ್ಯೋ ಗೃಹಸ್ಥಾಶ್ರಮ:
ಮದುವೆ ಭಾಂಧವ್ಯದ ಬೆಸುಗೆ. ಶಾಶ್ವತ ಸಂಕಲ್ಪ. ಆಡಂಬರದ ಪ್ರದರ್ಶನವಲ್ಲ. ಸಂಸ್ಕಾರದ ನಿದರ್ಶನವಾಗಬೇಬೇಕು, ಹಿಂದು ಕುಟುಂಬ ಪದ್ದತಿ ಹಾಗೂ ದಾಂಪತ್ಯ ಜೀವನ ಮಹತ್ವದ ಬಗ್ಗೆ ತಿಳಿಸಿದರು. ಪಶ್ಚಿಮ ದೇಶಗಳಲ್ಲಿ ಮದುವೆ ಕೇವಲ ಒಪ್ಪಂದವಾಗಿದ್ದರೆ ಭಾರತದಲ್ಲಿ ಕುಟುಂಬದ ಮೂಲಾಧಾರ. ಪತ್ನಿಯ ಕೈ ಹಿಡಿದು ಗೃಹಸ್ಥಾಶ್ರಮ ಧರ್ಮವನ್ನು ಪಾಲಿಸಬೇಕು. ಜೀವನದಲ್ಲಿ ಸಾಧನೆ ಮಾಡಲು ಪತಿ-ಪತ್ನಿ ಭಾವಾನಾತ್ಮಕವಾಗಿ ಒಂದಾಗಿರಬೇಕು. ಸಂಬಂಧಗಳು ನಾಟಕ ಸಿನೀಮಾಗಳಲ್ಲಿ ಭಾರತೀಯರಿಗೆ ಏಳೇಳು ಜನ್ಮಗಳ ಅನುಬಂಧ ಎಂದು ಹೇಳಿದರು. ಮದುವೆಯ ಸಂದರ್ಭದಲ್ಲಿ ದಂಪತಿಗಳನ್ನು ಲಕ್ಷ್ಮೀ ನಾರಾಯಣ ದಂಪತಿಗಳೆಂದು ಪುರೋಹಿತರು ಗುರುತಿಸುತ್ತಾರೆ. ಸಂಸ್ಕಾರದ ಒಂದು ಭಾಗ ಜೀವನಕ್ಕೆ ಒಂದು ದೃಷ್ಟಿ.ಇಬ್ಬರು ಸೇರಿ ಜೀವನ ಪರಿಪೂರ್ಣ, ಪರಸ್ಪರ ಭಾವನೆಗಳ ಹೊಂದಾಣಿಕೆ. ನಂಬಿಕೆ ವಿಶ್ವಾಸಗಳಿಂದ ದಾಂಪತ್ಯ ಜೀವನ ಭದ್ರವಾಗುತ್ತದೆ ಎಂದು ತಿಳಿಸಿದರು. ಹಿಂದು ಕುಟುಂಬಗಳಲ್ಲಿ ಹಕ್ಕುಗಳಿಗೆ ಒತ್ತಾಯವಿಲ್ಲ. ಜವಾಬ್ಧಾರಿಯಿದೆ. ಅಮ್ಮ ಕೇಂದ್ರ ಬಿಂದು. ಹಿಂದು ಕುಟುಂಬ ಪದ್ದತಿ ಜಗತ್ತಿಗೆ ಆದರ್ಶವಾಗಿ. ಧರ್ಮ ಪಾಲನೆಯೊಂದಿಗೆ ವಂಶೋದ್ದಾರವು ಕುಟುಂಬದಿಂದಾಗುತ್ತದೆ. ಪರಂಪರೆಯಿಂದ ಬಂದಿರುವ ಗುಣಗಳು ಜೀವನದಲ್ಲಿ ಅನುಸರಣೆಯಾಗಬೇಕು. ಪಾಶ್ವಿಮಾತ್ಯ ಅನುಕರಣೆಯಿಂದ ಸಂಸಾರ ಒಡೆಯುತ್ತದೆ. ಸಮಾಜ ದುರ್ಬಲವಾಗುತ್ತದೆ ಎಂದು ಎಚ್ಚರಿಕೆಯ ಮಾತು ಹೇಳಿದರು. ಹಿಂದು ಕುಟುಂಬಗಳಲ್ಲಿ ಮೌಲ್ಯ ತುಂಬಿದಾಗ
ಬಲಿಷ್ಟ ಭಾರತ ಕಟ್ಟಲು ಸಾಧ್ಯವಾಗುತ್ತದೆ. ಪ್ರತಿಯೋಂದು ಮನೆಗೂ ಒಂದು ದಿನಚರಿ, ಪೂರ್ವಜರ ಮಾನಸಿಕ ಹಾಗೂ ರೀತಿ ನೀತಿಗಳು ಮಾರ್ಗದರ್ಶಕವಾಗಬೇಕು. ನವದಂಪತಿಗಳು
ಸುತ್ತಮುತ್ತಲಿನವರಿಗೆ ಆದರ್ಶವಾಗಬೇಕು. ಜೀವನದ ಸಾಯಂಕಾಲದಲ್ಲಿ ಎಲ್ಲರಿಗೂ ಪ್ರಿಯರಾಗಿ ಬದುಕಬೇಕು ಎಂದು ಕಲ್ಲಡ್ಕ ವೇದವ್ಯಾಸ ಸಭಾಂಗಣದಲ್ಲಿ
ಶ್ರೀರಾಮ ವಿದ್ಯಾಕೇಂದ್ರದ ವತಿಯಿಂದ ಏರ್ಪಡಿಸಲಾದ ನವದಂಪತಿ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅಖಿಲ ಭಾರತ ಕುಟುಂಬ ಪ್ರಭೋಧನ್ ಪ್ರಮುಖರಾದ ಹಿರಿಯ ಪ್ರಚಾರಕರಾದ ಸು ರಾಮಣ್ಣ ಮಾರ್ಗದರ್ಶಿ ಭಾಷಣ ಮಾಡಿ ಹೇಳಿದರು.
ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಶ್ರೀ ಡಾ ಪ್ರಭಾಕರ ಭಟ್ ಪ್ರಸ್ತಾವಿಕ ಭಾಷಣ ಮಾಡಿದರು, ಕೌಟುಂಬಿಕ ಸಂಬಂಧಗಳು ದುರ್ಭಗೊಳ್ಳುತ್ತಿರುವುದು ದಾಂಪತ್ಯ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗಿದೆ. ವಿದೇಶಿಯ ಮದುವೆ ಹಾಗೂ ಭಾರತೀಯ ವಿವಾಹ ಪದ್ದತಿಗಳು ಭಿನ್ನವಾಗಿದ್ದು, ಮದುವೆಯಲ್ಲಿ ಸಾಮಾಜಿಕ ಹಾಗೂ ರಾಷ್ಟ್ರೀಯ ಭದ್ರತೆಯ ತಳಹದಿಯಾಗಿದೆ ಎಂದರು.
ವೇದಿಕೆಯಲ್ಲಿ ಹಿರಿಯ ದಂಪತಿಗಳಾಗಿ ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಶ್ರೀಮತಿ ಸುಶೀಲಾ ಪದ್ಮನಾಭ. ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ನಾರಾಯಣ ಸೋಮಯಾಜಿ ಉಪಸ್ಥಿತರಿದ್ದರು.
ನವದಂಪತಿ ಸಮಾವೇಶಕ್ಕಾಗಿ ಪರಿಸರವನ್ನು ತಳಿರು ತೋರಣ, ಕೇಸರಿ ಧ್ವಜ ಹಾಗೂ ರಂಗೋಲಿಯಿಂದ ಸಿಂಗರಿಸಲಾಗಿತ್ತು. ದಂಪತಿಗಳನ್ನು ಮಾತೃ ಮಂಡಳಿರ ಮಾತೆಯರು ಹರಸಿನ ಕುಕುಂಮ ಹೂ ನೀಡಿ, ಆರತಿ ಮಾಡಿ ಸ್ವಾಗತಿಸಿದರು. ಹಿರಿಯರು ತಿಲಕಧಾರಣೆ ಮಾಡಿ ಆರ್ಶೀವಾಧಿಸಿದರು. ಭಾರತ ಮಾತೆಗೆ ಪುಷ್ಪಾರ್ಚಾಣೆ ಮಾಡಿ ಸಭಾಂಗಣ ಪ್ರವೇಶಿಸಿದರು.೧ ೪೫ ಜೋಡಿ ಸಮಾವೇಷದಲ್ಲಿ ಪಾಲ್ಗೊಂಡಿದ್ದರು. ಎಡಭಾಗದಲ್ಲಿ ಗುತ್ತಿನ ಮನೆಯ ಯಜಮಾನ, ಬಲಭಾಗದಲ್ಲಿ ದೈವದ ಮಣೆಮಂಚ, ನೊಗನೋಗಿಲು, ಕೃಷಿ ಸಲಕರಣೆ ಹಿನ್ನೆಲೆ, ಧನ್ಯೋಗ್ರಹಸ್ಥಾಶ್ರಮ ಎಂಬ ವೇದಿಕೆ ಆಕರ್ಷಕವಾಗಿತ್ತು. ತೆಂಗಿನ ಹೊಂಬಾಲೆಯನ್ನು ಅರಳಿಸುವ ಮೂಲಕ ಸಮಾವೇಷ ಉದ್ಘಾಟನೆಗೊಂಡಿತ್ತು.