saraswathi pooje 2015 – ಸರಸ್ವತಿ ಪೂಜೆ

ವಿದ್ಯೆ ಎಂಬುದು ಕೇವಲ ಪುಸ್ತಕ, ಗುರುಗಳಿಂದ ಮಾತ್ರವಲ್ಲದೇ, ಮನುಷ್ಯ ತನ್ನ ಜ್ಞಾನವನ್ನು ಪರಸ್ಪರ ಹಂಚಿಕೊಂಡಾಗ ವಿದ್ಯೆ ಪ್ರಾಪ್ತಿಯಾಗುತ್ತದೆ. ಅಂತಹ ಜ್ಞಾನವನ್ನು ವ್ಯಕ್ತಪಡಿಸುವ ಚೈತನ್ಯ ಸರಸ್ವತಿ ಆರಾಧನೆಯಿಂದ ಸಾಧ್ಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ಅನಂತ ಪದ್ಮನಾಭ ಅಸ್ರಣ್ಣ ತಿಳಿಸಿದರು. ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಸರಸ್ವತಿ ಪೂಜೆ ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಜಯರಾಮ್ ಅಖಿಲ ಭಾರತೀಯ ವಾಕ್-ಶ್ರವಣ ಸಂಸ್ಥೆ ರೀಡರ್, ಶ್ರೀ ರಾಜರಾಮ್ ಉದ್ಯಮಿಗಳು, ಶ್ರೀ ಶಶಿರಾಜ್ ಕಾರ್ಪೋರೇಷನ್ ಬ್ಯಾಂಕ್ ನಿವೃತ್ತ ಸಹಾಯಕ ಮುಖ್ಯ ಪ್ರಬಂಧಕರು, ರವೀಂದ್ರ ಹೆಗ್ಡೆ, ವಿದ್ಯಾಕೇಂದ್ರದ ಸಂಚಾಲಕರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply