vishwa yoga day sri rama kalladka

ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ:
ದಿನಾಂಕ : ೨೧/೦೬/೨೦೧೯
ಬಂಟ್ವಾಳ : ಆನಂದ ಮತ್ತು ಸ್ವಾತಂತ್ರ್ಯ ಜೀವನಕ್ಕೆ ಅವಶ್ಯಕವಾದ ಎರಡು ವಿಷಯಗಳು. ಇವುಗಳನ್ನು ಸಾಧಿಸಲು ’ಯೋಗ’ ಎಂಬುದು ಒಂದು ಒಳ್ಳೆಯ ಸಾಧನ ಎಂದು ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಆರ್ಟ್ ಆಫ್ ಲಿವಿಂಗ್‌ನ ಯೋಗ ಶಿಕ್ಷಕರಾದ ಯತೀಶ್ ಬೊಂಡಾಲ ಅವರು ಹೇಳಿದರು. ಶ್ರೀಯುತರು ವಿದ್ಯಾರ್ಥಿಗಳಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಯೋಗವು ಮಹತ್ತರವಾದುದು ಎಂದು ಯೊಗಾಸನಗಳನ್ನು ಹೇಳಿಕೊಡುವುದರ ಮೂಲಕ ತಿಳಿಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ವಸಂತ ಬಲ್ಲಾಳ್ ಉಪಸ್ಥಿತರಿದ್ದರು. ಶ್ರೀಯುತ ಕರುಣಾಕರ್ ಅವರು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ, ವಂದಿಸಿ ಕಾರ‍್ಯಕ್ರಮವನ್ನು ನಿರೂಪಿಸಿದರು.

 

ಗೋಳ್ತಮಜಲು ಗ್ರಾಮ
ಗೋಳ್ತಮಜಲು ಗ್ರಾಮದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಕಲ್ಲಡ್ಕದ ಶ್ರೀರಾಮ ಮಂದಿರದಲ್ಲಿ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ವಿಟ್ಲ ತಾಲೂಕು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯವಾಹಿ ಸದಸ್ಯರಾದ ಸುಜಿತ್ ಕೊಟ್ಟಾರಿ, ಯೋಗ ಗುರುಗಳಾದ ಜಯಶ್ರೀ, ಗ್ರಾಮ ಪಂಚಾಯತ್ ಸದಸ್ಯರಾದ ಸುಮಿತ, ಗೋಳ್ತಮಜಲು ಗ್ರಾಮ ಸಮಿತಿಯ ಮಹಿಳಾ ಪ್ರಮುಖ್ ಶಾರದಾ, ಪೂಜಾ ಸಮಿತಿಯ ಗೋಪಾಲ, ಪೊಳಲಿಯ ಸಾಮಾಜಿಕ ಕಾರ್ಯಕರ್ತರಾದದಯಾನಂದ, ರೇಣುಕಾ ಚಂದ್ರಶೇಖರ್ , ಶ್ರೀರಾಮ ಪ್ರೌಢಶಾಲಾ ಸಹಶಿಕ್ಷಕರಾದ ಪ್ರಶಾಂತ್,ಪುರುಷೋತ್ತಮ್,ಸೇವಂತಿನಿ,ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
 
ಜೂನ್ ೨೧: ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಮತ್ತು ಗ್ರಾಮ ವಿಕಾಸ ಸಮಿತಿ ಅಮ್ಟೂರು ಇದರ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆ
ಯೋಗಾಸನ ದೇಹ ಹಾಗೂ ಮನಸ್ಸನ್ನು ಒಗ್ಗೂಡಿಸುವಂತಹ ಕ್ರಿಯೆ. ಆಂತರಿಕ ಹಾಗೂ ಬಾಹ್ಯವಾಗಿ ದೇಹವನ್ನು ಸಮತೋಲನದಲ್ಲಿರಿಸಿಕೊಳ್ಳಲು ಯೋಗಾಸನವು ಸರಳ ಹಾಗೂ ಸುಲಭ ವಿಧಾನ. ದೈನಂದಿನ ಯೋಗಾಭ್ಯಾಸದಿಂದ ಉತ್ತಮ ಆರೋಗ್ಯವನ್ನು ಹೊಂದಬಹುದು ಎಂದು ಶ್ರೀರಾಮ ವಿದ್ಯಾಕೇಂದ್ರ ಹಾಗೂ ಗ್ರಾಮ ವಿಕಾಸ ಸಮಿತಿ ಅಮ್ಟೂರು ಇದರ ಆಶ್ರಯದಲ್ಲಿ, ಅಮ್ಟೂರು ಕೇಶವನಗರದ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಗೋಳ್ತಮಜಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿರುವ ಜಯಲಕ್ಷ್ಮೀ ಇವರು ತಿಳಿಸಿದರು.
ಕಾರ‍್ಯಕ್ರಮದಲ್ಲಿ ಶ್ರೀರಾಮ ಪ್ರೌಢಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ, ವಿಶ್ವನಾಥ ಪ್ರಭು, ಗೋಳ್ತಮಜಲು ಪಂಚಾಯಿತಿ ಸದಸ್ಯರಾದ ಜಯಂತ ಗೌಡ ಹಾಗೂ ಶಾರದಾಂಬಾ ಭಜನಾ ಮಂದಿರ, ಕೇಶವನಗರ ಅಮ್ಟೂರು ಇದರ ಅಧ್ಯಕ್ಷರಾದ ನಾರಾಯಣ ಗೌಡ ಇವರು ಉಪಸ್ಥಿತರಿದ್ದರು. ಪ್ರೌಢಶಾಲಾ ಶಿಕ್ಷಕರಾದ ಗೋಪಾಲ್ ಶ್ರೀಮಾನ್ ಇವರು ಯೋಗದ ಅಭ್ಯಾಸಕ್ಕೆ ಚಾಲನೆ ನೀಡಿದರು, ಸೇರಿದ್ದಂತಹ ವಿದ್ಯಾರ್ಥಿಗಳಿಂದ ಯೋಗಾಭ್ಯಾಸ ನಡೆಯಿತು. ಶಿಕ್ಷಕರಾದ ಮನೋಜ್ ಶ್ರೀಮಾನ್ ಸ್ವಾಗತಿಸಿ ಅಮ್ಟೂರು ಗ್ರಾಮ ವಿಕಾಸ ಸಮಿತಿಯ ನಿರ್ವಾಹಕಿ ರೇಷ್ಮಾ ಇವರು ವಂದಿಸಿದರು. ಈ ಸಂದರ್ಭದಲ್ಲಿ ಗ್ರಾಮ ವಿಕಾಸ ಸಮಿತಿಯ ಸದಸ್ಯರಾದ ಕುಶಾಲಪ್ಪ ಅಮ್ಟೂರು ಹಾಗೂ ಶಿಕ್ಷಕಿ ಭಾಗ್ಯ ಉಪಸ್ಥಿತರಿದ್ದರು

Leave a Reply