ಬಂಟ್ವಾಳ:ಸೆ.೫: ಯೋಗ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಒಂದು ಜೀವನ ಪದ್ದತಿಯಾದ್ದರಿಂದ ಇದು ಕೇವಲ ದೈಹಿಕ ಶಿಕ್ಷಣ ಚಟುವಟಿಕೆಯ ವಿಭಾಗವಾಗದೇ ಇದಕ್ಕಾಗಿಯೇ ಪ್ರತ್ಯೇಕ ವಿಭಾಗವನ್ನು, ಉಪನ್ಯಾಸಕರನ್ನು ನೇಮಿಸಬೇಕಾಗಿದೆ. ಸರಕಾರವು, ಯೋಗಾಸಕ್ತರು ಇದಕ್ಕಾಗಿ ವಿಶೇಷವಾಗಿ ಪ್ರಯತ್ನಿಸಬೇಕಾಗಿದೆ. ಆದರೆ ಈ ಬಾರಿ ಸರಕಾರದ ನೇಮಕಾತಿಯಲ್ಲಿ ದೈಹಿಕ ಶಿಕ್ಷಣ ವಿಭಾಗಕ್ಕೆ ಯಾವುದೇ ಅವಕಾಶ ಸಿಗದಿರುವುದು ದುರಂತ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ|ಕಿಶೋರ್ ಕುಮಾರ್ ಸಿ.ಕೆ ಇವರು ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ ಇಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ […]