Archive for January, 2022

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ 73ನೇ ಗಣರಾಜ್ಯೋತ್ಸವ

Wednesday, January 26th, 2022
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ 73ನೇ ಗಣರಾಜ್ಯೋತ್ಸವ

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ 73ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಪ್ರೌಢ ಶಾಲೆಯ ಹಿರಿಯ ವಿದ್ಯಾರ್ಥಿ, ಕಾಂಪ್ರಬೈಲ್ ಶ್ರೀ ಉಳ್ಳಾಲ್ತಿ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಶ್ರೀ ಜಯಾನಂದ ಆಚಾರ್ಯ ಧ್ವಜಾರೋಹಣ ಮಾಡಿದರು. ಕಾರ್ಯಕ್ರಮದಲ್ಲಿ ಪ್ರೌಢ ಶಾಲೆಯ ಎನ್.ಸಿ.ಸಿ ವಿದ್ಯಾರ್ಥಿಗಳು ಘೋಷ್ ವಾದನದೊಂದಿಗೆ  ಪಥಸಂಚಲನ ನಡೆಸಿದರು.ನಂತರ ಪ್ರೌಢಶಾಲೆಯಲ್ಲಿ ನಡೆದ ಸಭಾ ಕಾರ್‍ಯಕ್ರಮದಲ್ಲಿ ಗಣ್ಯರು ಡಾ. ಬಿ.ಆರ್. ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಯತಿರಾಜ್ ಪೆರಾಜೆ ಮಾತನಾಡುತ್ತಾ ಇಂದು ಜಯಂತಿ, ಉತ್ಸವಗಳ ಆಚರಣೆ ನಾಟಕೀಯವಾಗಿದ್ದು, ಉದ್ದೇಶಿತ […]

ಭಜನೆಯೇ ನನ್ನ ಯಶಸ್ಸಿನ ಹಿಂದಿನ ರಹಸ್ಯ ಕಲ್ಲಡ್ಕದ ಆಜಾದಿ ಪರ್ವ ಸಮಾರೋಪ ಸಮಾರಂಭದಲ್ಲಿ ಖ್ಯಾತ ಗಾಯಕ ಸಂದೇಶ್ ನೀರುಮಾರ್ಗ

Friday, January 14th, 2022
ಭಜನೆಯೇ ನನ್ನ ಯಶಸ್ಸಿನ ಹಿಂದಿನ ರಹಸ್ಯ ಕಲ್ಲಡ್ಕದ ಆಜಾದಿ ಪರ್ವ ಸಮಾರೋಪ ಸಮಾರಂಭದಲ್ಲಿ ಖ್ಯಾತ ಗಾಯಕ ಸಂದೇಶ್ ನೀರುಮಾರ್ಗ

ಜ: ೧೪, ಕಲ್ಲಡ್ಕದ ಶ್ರೀರಾಮ ಪ್ರಥಮದರ್ಜೆ ಕಾಲೇಜಿನಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ದ.ಕ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ನಡೆದ ?ಆಜಾದಿ ಪರ್ವ? ಹೆಸರಿನ ಅಂತರ್‌ಕಾಲೇಜು ಫೆಸ್ಟ್‌ನ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಲರ್ಸ್ ಕನ್ನಡ “ಎದೆ ತುಂಬಿ ಹಾಡುವೆನು “ಖ್ಯಾತಿಯ ಶ್ರೀ ಸಂದೇಶ್ ನೀರುಮಾರ್ಗ ಮಾತನಾಡುತ್ತಾ, ?ಬಾಲ್ಯದಿಂದಲೂ ಭಜನೆಯಲ್ಲಿ ಅತೀವ ಆಸಕ್ತಿ ಇದ್ದ ನನಗೆ ಇಂದು ಅದುವೇ ಮೆಟ್ಟಿಲಾಗಿ ಎತ್ತರಕ್ಕೆ ಕರೆದೊಯ್ದಿದೆ. ಎಸ್. ಪಿ. ಬಾಲಸುಬ್ರಹ್ಮಣ್ಯರಂತಹ ಶ್ರೇಷ್ಟ ಗಾಯಕರು ರಚಿಸಿದ […]