ಸನಾತನ ಸಂಸ್ಕೃತಿಯ ಪ್ರತಿರೂಪ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿದೆ. ನಮ್ಮ ಭಾಷೆ ನಡೆ ನುಡಿ ಪರಪರೆಗಳು ಕ್ಲಿಷ್ಟಕರವಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಉತ್ತಮ ಶಿಕ್ಷಣದಿಂದ ಮಾತ್ರದೇಶಕ್ಕೆ ಉತ್ತಮ ಭವಿಷ್ಯವಿದೆ. ಎಂದು ಉದಯವಾಣಿ ಸುದ್ದಿ ಸಂಸ್ಥೆಯ ಮುಖ್ಯಸ್ಥ ಹಿರಿಯ ಪತ್ರಕರ್ತ ಮನೋಹರ ಪ್ರಸಾದ ಹೇಳಿದರು. ಅವರು ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ೧೦ನೇತರಗತಿ ವಿದ್ಯಾರ್ಥಿಗಳ ದೀಕ್ಷಾಂತ ಮತ್ತು ದೀಪ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು. ರಾಮಾಯಾಣ iಹಾಭಾರತ ಮಹಾಕಾವ್ಯಗಳಾಗಿದ್ದು, ಅವು ಪುರಾಣಗಳಲ್ಲ. ಇತಿಹಾಸದಲ್ಲಿ ನಡೆದು ಹೋದ ಘಟನೆಗಳು ಜೀವನಕ್ಕೆ ಸ್ಫೂತ್ರಿದಾಯಕವಾಗಿವೆ. ವಿದ್ಯಾರ್ಥಿಗಳು ಉತ್ತಮ ಗುಣ ನಡತೆಗಳನ್ನು […]
ಶ್ರೀರಾಮ ಪ್ರೌಢಶಾಲೆಯಲ್ಲಿ ಅಂತರ್ಜಾಲ ಪ್ರಪಂಚ ಕಾರ‍್ಯಕ್ರಮ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಅಂತರ್ಜಾಲ ಶಿಕ್ಷಣದ ಪ್ರಾಮುಖ್ಯತೆ ಹಾಗೂ ಉಪಯೋಗ ತಿಳಿಸುವ ಕಾರ‍್ಯಕ್ರಮ. ಹತ್ತಿರದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಒಟ್ಟು ನಾಲ್ಕು ದಿವಸ ಈ ಕಾರ‍್ಯಕ್ರಮ ನಡೆಯಲಿದೆ. ಅಂತರ್ಜಾಲದಲ್ಲಿ ಅನೇಕ ವಿಷಯಗಳು ನಮಗೆ ದೊರೆಯುತ್ತದೆ. ಆದರೆ ನಾವು ನಮ್ಮ ಶಿಕ್ಷಣಕ್ಷೆ ಸಂಬಂಧಿಸಿ ವಿಷಯಗಳು ಹಾಗೂ ಇ-ಲೈಬ್ರೇರಿಯ ಮೂಲಕ ವಿವಿಧ ರೀತಿಯ ಪುಸ್ತಕಗಳನ್ನು ತೆರೆದು ಓದುವುದು ಉತ್ತಮ ಎಂದು ದಿನಾಂಕ 25.2.2016ರಂದು ಬೆಳಿಗ್ಗೆ ಶ್ರೀರಾಮ ವಿದ್ಯಾಕೇಂದ್ರದದಲ್ಲಿ ನಡೆದ ವಿದ್ಯಾರ್ಥಿ ಅಂತರ್ಜಾಲ ಪ್ರಪಂಚ […]
ನೇತಾಜಿ ಈ ದೇಶ ಕಂಡ ಅಪ್ರತಿಮ ದೇಶ ಭಕ್ತ. ಅವರು ನಮ್ಮನ್ನಗಲಿದರೂ ತನ್ನ ಚಿಂತನೆಯ ಪ್ರಖರತೆ, ಕಾರ್ಯದ ನಿಖರತೆಯಿಂದಾಗಿ ಎಂದೆಂದಿಗೂ ಚಿರಂಜೀವಿಗಳು. ತನ್ನ ಸರ್ವಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಅವರು ತನ್ನ ಶಿಕ್ಷಕರ ಸಮರ್ಥ ಮಾರ್ಗದರ್ಶನದಿಂದ ನೇತಾ ಎನಿಸಿಕೊಂಡು ಮುಂದೆ ದೇಶಾದ್ಯಂತ ನೇತಾಜಿ ಎಂದೇ ಪ್ರಸಿದ್ಧರಾದರು. ಜೊತೆಗೆ ತಂದೆ-ತಾಯಂದಿರೂ ಇವರ ಹೋರಾಟದ ಪ್ರವೃತ್ತಿಗೆ ನೀರೆರೆದು ಪೋಷಿಸಿದರು. ಬ್ರಿಟೀಷರ ಕುತಂತ್ರಕ್ಕೆ ಹೋರಾಟದ ಮೂಲಕವೇ ಉತ್ತರ ಕೊಡಬೇಕೆಂದು ವಿದೇಶಗಳಿಗೆ ಹೋಗಿ ಅಲ್ಲಿ ಬ್ರಿಟೀಷರ ವಿರುದ್ಧ ಸಂಘಟನೆ ಮಾಡಿದವರು. ನೇತಾಜಿಯವರ ಸಮಗ್ರ ಜೀವನವನ್ನು […]
2015ನೇ ಸಾಲಿನ ರಾಜ್ಯ ಮಟ್ಟದ ಪ್ರತಿಭಾನ್ವೇಷಣಾ ಪರೀಕ್ಷೆNMMS) ದಿನಾಂಕ 8.11.2015ರಂದು ಕಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಎರಡು ಕೇಂದ್ರ ಶ್ರೀರಾಮ ಪ್ರೌಢಶಾಲೆ ಮತ್ತು ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ಜರಗಿತು. ಬಂಟ್ವಾಳ ತಾಲೂಕಿನ ೮ನೇ ತರಗತಿಯಲ್ಲಿ ಕಲಿಯುತ್ತಿರುವ ಸುಮಾರು ೧೫೦ಕ್ಕೂ ಹೆಚ್ಚು ಶಾಲೆಯ 1153 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾವಣೆ ಮಾಡಿದ್ದು, 1094ವಿದ್ಯಾರ್ಥಿಗಳು ಹಾಜರಾಗಿರುತ್ತಾರೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ಬೌದ್ಧಿಕ್ ಪರೀಕ್ಷೆ (GMAT) ಮತ್ತು ವ್ಯಾಸಂಗ ಪ್ರವೃತ್ತಿ ಪರೀಕ್ಷೆ(SAT) 90ನಿಮಿಷ ಅವಧಿಯ ೯೦ ಅಂಕಗಳ 90 ಬಹು ಆಯ್ಕೆ ಪ್ರಶ್ನೆಗಳನ್ನು ನೀಡಲಾಗಿತ್ತು. ಎರಡು […]
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಶಿಶುಮಂದಿರದ ಪುಟಾಣಿಗಳಿಗೆ ನವರಾತ್ರಿಯ ವಿಜಯದಶಮಿ ದಿನದಂದು ವೇದವ್ಯಾಸ ಧ್ಯಾನಮಂದಿರದಲ್ಲಿ ವಿದ್ಯಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸರಸ್ವತಿ ಹೋಮದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಒಡಿಯೂರು ಕ್ಷೇತ್ರದ ಪರಮ ಪೂಜನೀಯ ಶ್ರೀಶ್ರೀ ಸಾಧ್ವಿ ಮಾತಾನಂದಮಯಿಯವರು ಶ್ರೀರಾಮ ವಿದ್ಯಾಕೇಂದ್ರದ ಆಶ್ರಯದಲ್ಲಿ ನಡೆಯುವಂತಹ ೫ ಶಿಶುಮಂದಿರಗಳ ಒಟ್ಟು ೮೫ ಮಕ್ಕಳಿಗೆ ಮಗುವಿನ ಕೈಯಲ್ಲಿ ಅರಶಿನ ಕೊಂಬನ್ನು ಹಿಡಿದು ಹರಿವಾಣದಲ್ಲಿ ಅಕ್ಕಿಯ ಮೇಲೆ ಅಕ್ಷರಗಳನ್ನು ಬರೆಸುವುದರ ಮೂಲಕ ಅಕ್ಷರಾಭ್ಯಾಸ ಮಾಡಿಸಿದರು. ಈ ಸಂಸ್ಥೆ ಸಂಸ್ಕಾರ ಸಂಸ್ಕೃತಿಯೊಂದಿಗೆ ಆಚರಣೆಗಳನ್ನು ಜೋಡಿಸಿಕೊಂಡು ಮಕ್ಕಳ ಉತ್ತಮ ಭವಿಷ್ಯ […]
ವಿದ್ಯಾರ್ಥಿಗಳಿಗೆ ರಾಷ್ಟ್ರದ ಉತ್ತಮ ವಿಚಾರಗಳನ್ನು ತಿಳಿಸುವ ಕಾರ್ಯವನ್ನು ವಿದ್ಯಾಕೇಂದ್ರ ನಡೆಸುತ್ತದೆ. ಈ ವಿಚಾರಗಳ ಮಗುವಿನಲ್ಲಿ ಉತ್ತಮ ಭಾವನೆಗಳನ್ನು ಬಿತ್ತಿ ಮನಸ್ಸನ್ನು ಅರಳಿಸಲು ಸಹಾಯವಾಗುತ್ತದೆ. ಇಂತಹ ಕಾರ್ಯಗಳನ್ನು ಪ್ರತೀ ಮಗುವಿನ ಮನೆಯಲ್ಲೂ ಮುಂದುವರೆಸುವ ಕಾರ್ಯವನ್ನು ಪೋಷಕರು ನಡೆಸಬೇಕು. ಆ ಮೂಲಕ ಸಮಾಜೋಪಯೋಗಿ ವ್ಯಕ್ತಿಯಾಗಿ ಮಗು ರೂಪುಗೊಳ್ಳಲು ಸಾಧ್ಯ ಎಂದು ಡಾ| ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದರು. ಶ್ರೀರಾಮ ವಸತಿ ನಿಲಯದ ಪೋಷಕರ ಸಭೆಯನ್ನುದ್ದೇಶಿಸಿ ಮಾರ್ಗದರ್ಶನ ನೀಡಿದರು. ಪೋಷಕರು ಶ್ರೀರಾಮ ವಿದ್ಯಾಕೇಂದ್ರದ ವಸತಿ ನಿಲಯದ ವ್ಯವಸ್ಥೆಯ ಬಗ್ಗೆ ಉತ್ತಮ ಅಭಿಪ್ರಾಯ […]