ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳ

Wednesday, August 22nd, 2018
ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳ

ಶ್ರೀರಾಮ ವಿದ್ಯಾಕೇಂದ್ರದ ಪದವಿ ಪೂರ್ವ ವಿಭಾಗದಲ್ಲಿ ದಿನಾಂಕ 23.8.2018ರಂದು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳ ನಡೆಯಲಿರುವುದು.

ಅಥ್ಲೆಟಿಕ್ಸ್

Tuesday, August 21st, 2018
ಅಥ್ಲೆಟಿಕ್ಸ್

  20.08.2018 ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಜಿಲ್ಲಾಮಟ್ಟದ “ಅಥ್ಲೆಟಿಕ್ಸ್” ಪಂದ್ಯಾಟದಲ್ಲಿ 5ನೇ ತರಗತಿಯ ಯಶ್ಮಿತಾ, 400 ಮೀ. ಓಟ ಪ್ರಥಮ, 5ನೇ ತರಗತಿಯ ಪ್ರಥಮ್ ಉದ್ದ ಜಿಗಿತದಲ್ಲಿ ದ್ವಿತೀಯ, 5ನೇ ತರಗತಿಯ ನಿತೇಶ್ ಗುಂಡು ಎಸೆತ ದ್ವಿತೀಯ ಹಾಗೂ 5ನೇ ತರಗತಿಯ ಸುಶ್ಮಿತಾ 200ಮೀ ಓಟ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಹಾಗೂ ಬಾಲಕಿಯರ 4X100 ಮೀ. ರಿಲೇ ಓಟದಲ್ಲಿ ದ್ವಿತೀಯ ಸ್ಥಾನ, 5ನೇ ತರಗತಿಯ ಅನ್ವಿ ಎತ್ತರ ಜಿಗಿತದಲ್ಲಿ ತೃತೀಯ, 5ನೇ ತರಗತಿಯ […]

ಕರಾಟೆ

Tuesday, August 21st, 2018
ಕರಾಟೆ

  09/08/2018 ರಂದು ಬುರೂಜ್ ಆಂಗ್ಲ ಮಾಧ್ಯಮ ಶಾಲೆ, ಸಿದ್ಧಕಟ್ಟೆ ವಾಮದಪದವು ಇಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 14 ಕುಮಿಟೆ ವಿಭಾಗದಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾದ 6ನೇ ತರಗತಿಯ ಗುಣಶ್ರೀ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾಳೆ.

ಚೆಸ್ ಪಂದ್ಯಾಟ

Tuesday, August 21st, 2018
ಚೆಸ್ ಪಂದ್ಯಾಟ

  ದಿನಾಂಕ 07/08/2018 ರಂದು ದ.ಕ.ಜಿ,ಪ ಹಿರಿಯ ಪ್ರಾಥಮಿಕ ಶಾಲೆ ಪಾಟ್ರಕೋಡಿಯಲ್ಲಿ ನಡೆದ ವಲಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಭಾಗವಹಿಸಿ 7ನೇ ತರಗತಿಯ ಅಕ್ಷಿತ್ ” ದ್ವಿತೀಯ ಸ್ಥಾನ, 6ನೇ ತರಗತಿಯ ಚಿನ್ಮು ದ್ವಿತೀಯ ಸ್ಥಾನ, 6ನೇ ತರಗತಿಯ ಕುಶಿ ಪೂಜಾರಿ ಪಂಚಮ ಸ್ಥಾನ ಪಡೆದಿರುತ್ತಾರೆ.

ಶಟಲ್ ಬ್ಯಾಡ್ಮಿಂಟನ್

Tuesday, August 21st, 2018
ಶಟಲ್ ಬ್ಯಾಡ್ಮಿಂಟನ್

13/08/2018 ರಂದು ಶ್ರೀರಾಮ ಪ್ರಾಥಮಿಕ ಶಾಲೆ ಕಲ್ಲಡ್ಕದಲ್ಲಿ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ 6ನೇ ತರಗತಿಯ ಚಿನ್ಮು , ಕುಶಿ ಹಾಗೂ 7ನೇ ತರಗತಿಯ ರ್ವಣಿ ಹಾಗೂ ತ್ರಿಶಾ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಬಾಲಕರ ವಿಭಾಗದಲ್ಲಿ 7ನೇ ತರಗತಿಯ ಪ್ರಥಮ್ ಗೌಡ , ಮನೀಶ್ , ಜಯಸೂರ್ಯ, ಅಕ್ಷಿತ್ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.  

ಪ್ರತಿಭಾ ಕಾರಂಜಿ ವಿಜೇತರು

Monday, August 20th, 2018
ಪ್ರತಿಭಾ ಕಾರಂಜಿ ವಿಜೇತರು

ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಶ್ರೀರಾಮ ಪ್ರಾಥಮಿಕ ಶಾಲಾ ಕಿರಿಯ ವಿಭಾಗದ ವಿದ್ಯಾರ್ಥಿಗಳು

ಅಟಲ್ ಬಿಹಾರಿ ವಾಜಪೇಯಿಯವರಿಗೆ ಶ್ರದ್ದಾಂಜಲಿ

Saturday, August 18th, 2018
ಅಟಲ್ ಬಿಹಾರಿ ವಾಜಪೇಯಿಯವರಿಗೆ ಶ್ರದ್ದಾಂಜಲಿ

ಶ್ರೀರಾಮ ಪ್ರೌಢಶಾಲೆಯಲ್ಲಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ ನಡೆಯಿತು. ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳಿಂದ ಒಂದು ನಿಮಿಷ ಮೌನ ಪ್ರಾರ್ಥನೆ. ಬಳಿಕ ವಿನುತಾ ಮಾತಾಜಿ ವಾಜಪೇಯಿಯವರ ಜೀವನಚರಿತ್ರೆಯ ಬಗ್ಗೆ ಮಾತನಾಡಿದರು

ಸ್ಮರಣ ಸಂಚಿಕೆ ಪೂರ್ವಬಾವಿ ಸಭೆ

Saturday, August 18th, 2018
ಸ್ಮರಣ ಸಂಚಿಕೆ ಪೂರ್ವಬಾವಿ ಸಭೆ

ಪ್ರಾಥಮಿಕ ಶಾಲೆಗೆ 30 ವರ್ಷ ತುಂಬಿದ ಸಂಭ್ರಮದ ನೆನಪಿಗೆ ಮೂರು ಸ್ಮರಣ ಸಂಚಿಕೆ ದಶಂಬರ ತಿಂಗಳಿನಲ್ಲಿ ಬಿಡುಗಡೆಯಾಗಲಿರುವುದು.  ಇದರ ಪೂರ್ವಭಾವಿ ಸಭೆ ವಿದ್ಯಾಕೇಂದ್ರದಲ್ಲಿ ಡಾ|ಪ್ರಭಾಕರ ಭಟ್ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು

ಜಾದೂ ಕಾರ್ಯಕ್ರಮ

Friday, July 27th, 2018
ಜಾದೂ ಕಾರ್ಯಕ್ರಮ

ಶ್ರೀರಾಮ ಪ್ರೌಢಶಾಲೆಯಲ್ಲಿ ಸಂಸ್ಥೆಯ ಸಂಯೋಜನೆಯೊಂದಿಗೆ ರಾಮಕೃಷ್ಣ ಮಿಶನ್ ಸ್ವಚ್ಛ ಮಂಗಳೂರು ಪ್ರಸ್ತುತಪಡಿಸಿದ “ಸ್ವಚ್ಛತೆಗಾಗಿ ಜಾದೂ” ಕಾರ್ಯಕ್ರಮ ನಡೆಯಿತು. ಸನ್ಮಾನ್ಯ ಪ್ರಧಾನಮಂತ್ರಿ ಮೋದಿಯವರ ಸ್ವಚ್ಛ ಭಾರತ ಕಲ್ಪನೆಯನ್ನು ರಾಮಕೃಷ್ಣ ಮಿಶನ್ ಬಳಗದವರು ಅಕ್ಷರಶಃ ಜಾರಿಗೆ ತಂದು ಕಾರ್ಯಗತಗೊಳಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕುದ್ರೋಳಿ ಗಣೇಶ್‌ರವರು ಸಮಾಜದ ಹಿತದೃಷ್ಟಿಯಿಂದ ಸ್ವಚ್ಛತೆಯ ಜಾಗೃತಿ ಕಾರ್ಯಕ್ರಮ ಮಾಡುತ್ತಿರುವುದು ಸಂತೋಷದಾಯಕ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ|| ಪ್ರಭಾಕರ ಭಟ್ ಕಲ್ಲಡ್ಕ ಇವರು ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆದ “ಸ್ವಚ್ಛತೆಗಾಗಿ ಜಾದೂ” ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. […]

ಏಣೆಲ್ ಕೃಷಿ

Thursday, July 26th, 2018
ಏಣೆಲ್ ಕೃಷಿ