ವಿದ್ಯೆ ಎಂಬುದು ಕೇವಲ ಪುಸ್ತಕ, ಗುರುಗಳಿಂದ ಮಾತ್ರವಲ್ಲದೇ, ಮನುಷ್ಯ ತನ್ನ ಜ್ಞಾನವನ್ನು ಪರಸ್ಪರ ಹಂಚಿಕೊಂಡಾಗ ವಿದ್ಯೆ ಪ್ರಾಪ್ತಿಯಾಗುತ್ತದೆ. ಅಂತಹ ಜ್ಞಾನವನ್ನು ವ್ಯಕ್ತಪಡಿಸುವ ಚೈತನ್ಯ ಸರಸ್ವತಿ ಆರಾಧನೆಯಿಂದ ಸಾಧ್ಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ಅನಂತ ಪದ್ಮನಾಭ ಅಸ್ರಣ್ಣ ತಿಳಿಸಿದರು. ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಸರಸ್ವತಿ ಪೂಜೆ ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಜಯರಾಮ್ ಅಖಿಲ ಭಾರತೀಯ ವಾಕ್-ಶ್ರವಣ ಸಂಸ್ಥೆ ರೀಡರ್, ಶ್ರೀ ರಾಜರಾಮ್ ಉದ್ಯಮಿಗಳು, […]
ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್(ರಿ) ಕಲ್ಲಡ್ಕ, ಇದರ ಆಶ್ರಯದಲ್ಲಿ ನಡೆಯುವ ಸರಸ್ವತಿ ಶಿಶುಮಂದಿರ ನಾಟಿ ಕೊಪ್ಪಳಕೋಡಿ, ನರಿಕೊಂಬು ಇದರ ನೂತನ ಕಟ್ಟಡದ ಶಿಲಾನ್ಯಾಸ ದಿನಾಂಕ ೩೧.೦೧.೨೦೧೫ ಶನಿವಾರದಂದು ನೆರವೇರಿತು. ಶಿಶುಮಂದಿರದ ಕಟ್ಟಡದ ಶಿಲಾನ್ಯಾಸವನ್ನು ಸಾವಿತ್ರಿ ಸೋಮಯಾಜಿ ಮತ್ತು ಮುರಳೀಧರ ರಮಣಿಯವರು ಹಾಗೂ ಶಿಶುಮಂದಿರದ ಪಾಕಶಾಲಾ ಕಟ್ಟಡದ ಶಿಲಾನ್ಯಾಸವನ್ನು ಮುರಳೀಧರ ಉಡುಪ ಮತ್ತು ಜಗನ್ನಾಥ ಬಂಗೇರ ನಿರ್ಮಲ್ ಇವರು ನೆರವೇರಿಸಿಕೊಟ್ಟರು. ಮಕ್ಕಳೆಂದರೆ ದೇವರು. ಮಕ್ಕಳ ಒಳಗೇ ದೇವರಿದ್ದಾರೆ. ತುಂಬಾ ವಿದ್ಯಾವಂತರಾಗಿರುತ್ತಾರೆ. ಈಗೀಗ ತಂದೆ ತಾಯಿಗಳ ಒತ್ತಡಕ್ಕೆ ಮಣಿದು ತಮ್ಮ ಮನಸ್ಸಿಗೆ […]
ದಿನಾಂಕ 26.01.2015ನೇ ಸೋಮವಾರದಂದು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಗಣರಾಜ್ಯೋತ್ಸವ ಕಾರ‍್ಯಕ್ರಮ ನೆರವೇರಿತು. ಕಾರ‍್ಯಕ್ರಮದಲ್ಲಿ ಶ್ರೀ ಗಣೇಶ್ ಬಂಟ್ವಾಳ ಉದ್ಯಮಿಗಳು ಧ್ವಜಾರೋಹಣಗೈದು ಶುಭಹಾರೈಸಿದರು. ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿಪೂರ್ವ, ಪದವಿ ವಿಭಾಗದ ವಿದ್ಯಾರ್ಥಿಗಳಿಂದ ಘೋಷ್ ತಾಳಕ್ಕೆ ಸಾಮೂಹಿಕ ಯೋಗ ವ್ಯಾಯಾಮ ಪ್ರದರ್ಶನ ನಡೆಯಿತು. ಕಾರ‍್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಡಾ| ಪ್ರಭಾಕರಭಟ್ ಕಲ್ಲಡ್ಕ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ವಸಂತಮಾಧವ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೃಷ್ಣಪ್ರಸಾದ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರವಿರಾಜ ಕಣಂತೂರು ಉಪಸ್ಥಿತರಿದ್ದರು.