ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇದರ ವಠಾರದಲ್ಲಿ ದಿನಾಂಕ ೧೦.೧೨.೨೦೧೬ ರಿಂದ ೧೮.೧೨.೨೦೧೬ ರವರೆಗೆ ಬೃಹತ್ ಪುಸ್ತಕ ಮೇಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ. ಇದರ ಉದ್ಘಾಟನೆಯನ್ನು ಜಪ್ರೋ ಅಂತರಾಷ್ಟ್ರೀಯ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಜ ರವಿವರ್ಮರ ವಂಶಸ್ಥರಾದ ಪ್ರಸ್ತುತ ಮುಂಬೈಯಲ್ಲಿ ದೇಶಿ ಗೋವುಗಳ ರಕ್ಷಣೆ, ಪಾಲನಾ ಕಾರ್ಯದಲ್ಲಿ ನಿರತರಾದ ಕು.ಸೀತಾ ವರ್ಮ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಪುಸ್ತಕ ಮೇಳದಲ್ಲಿ ಮಕ್ಕಳ ಕಥೆ ಪುಸ್ತಕಗಳು, ಭಾರತೀಯ ಸಂಸ್ಕೃತಿಗೆ ಸಂಬಂಧಿಸಿ ಪುರಾಣ, ಮಹಾಪುರುಷರು, ಗಣಿತ, ವಿಜ್ಞಾನ, ಮಾನವೀಯ ಮೌಲ್ಯಗಳು, ವ್ಯಕ್ತಿತ್ವ […]
ಕಲ್ಲಡ್ಕ: ದಶಂಬರ ೮ : ’ವಸುಧಾರಾ’ ಗೋಶಾಲೆ ಲೋಕಾರ್ಪಣೆ – ಗೋವು ದೇಶದ ಪ್ರಾಣಿಯಲ್ಲ ದೇಶದ ಪ್ರಾಣ ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳು ಶ್ರೀರಾಮಚಂದ್ರಾಪುರ ಮಠ, ಹೊಸನಗರ ಇವರು ಗೋ-ಶಾಲೆಯ ಮುಂಭಾಗದಲ್ಲಿರುವ ಕೃಷ್ಣನ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ಗೋವುಗಳಿಗೆ ಗೋಗ್ರಾಸ ನೀಡಿದರು. ನಂತರ ನಾಮಪಲಕದ ಪರದೆಯನ್ನು ಸರಿಸುವ ಮೂಲಕ ಗೋಶಾಲೆಯನ್ನು ಲೋಕಾರ್ಪಣೆಗೊಳಿಸಿದರು. ಬಿಸಿಲನ್ನು ಲೆಕ್ಕಿಸದೇ ಕುಳಿತಿರುವ ವಿದ್ಯಾರ್ಥಿಗಳನ್ನು ಕಂಡು ಮುಂದಿನ ಜೀವನದಲ್ಲಿ ತುಂಬಾ ಬಿಸಿಲು ಇರುವುದು. ಆ ಬಿಸಿಲನ್ನು ಎದುರಿಸಿ ಗೆಲ್ಲುವ ಶಕ್ತಿಗೆ ನಾವು ಈಗಾಗಲೇ ಸಿದ್ದರಾಗಬೇಕು. ಕಲ್ಲಡ್ಕದ […]