ನವೆಂಬರ್ ೨೪ ೨೦೧೪: ಮಕ್ಕಳ ಸಂರಕ್ಷಣೆ ಮತ್ತು ಪೊಕ್ಸೋ ಆಕ್ -೨೦೧೨ ಬಗ್ಗೆ ಮಾಹಿತಿ ಧರ್ಮದ ತಳಹದಿಯಲ್ಲಿ ಧರ್ಮಾಧಾರಿತ ಚಾರಿತ್ರ್ಯವಂತರಾಗಿ ಮಕ್ಕಳನ್ನು ಬೆಳೆಸುವ ಕಾರ‍್ಯ ಶಿಕ್ಷಕರಿಂದ ಆಗಬೇಕು. ಮಗುವಿನ ತಾಯಿ ತಂದೆಯಂತೆ ಶಿಕ್ಷಕರು ಕಾರ‍್ಯ ನಿರ್ವಹಿಸಬೇಕು ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ|| ಪ್ರಭಾಕರ ಭಟ್ ಹೇಳಿದರು. ಅವರು ಕಲ್ಲಡ್ಕ ಮಧುಕರ ಸಭಾಂಗಣದಲ್ಲಿ ಸೋಮವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ […]
ಶ್ರೀರಾಮ ಪ್ರಾಥಮಿಕ ಕಲ್ಲಡ್ಕ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸರ್ಕಾರಿ ಪ್ರೌಢಶಾಲೆ ನಯನಾಡು ಇಲ್ಲಿ ನಡೆದ ತಾಲೂಕು ಮಟ್ಟದ ಮೇಲಾಟ ಸ್ಪರ್ಧೆಗಳಲ್ಲಿ ಶ್ರೀರಾಮ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಫಯಾ, ಯೂಕಿದಾಮೆ, ಕಿಪ್ನಿ, ಕಾರ್ತಿಕ್, ಚೇತನ್, ತೇಜಸ್ವಿನಿ, ಸ್ವಪ್ನ ಎಸ್. ನಾಯಕ್ ಜಿಲ್ಲೆಗೆ ಆಯ್ಕೆಯಾಗಿರುತ್ತಾರೆ. ಫಯಾ ವೈಯಕ್ತಿಕ ಪ್ರಶಸ್ತಿಯನ್ನು ಪಡೆದಿರುತ್ತಾನೆ.