ಶ್ರೀರಾಮ ಪದವಿ ಕಾಲೇಜಿನಲ್ಲಿ ಹೆತ್ತವರ ಸಭೆ

Tuesday, September 4th, 2018
ಶ್ರೀರಾಮ ಪದವಿ ಕಾಲೇಜಿನಲ್ಲಿ ಹೆತ್ತವರ ಸಭೆ

 ಸೆ: ೦4, ನಮ್ಮವರಿಂದಲೇ ನಮ್ಮತನದ ನಾಶವಾದರೆ ಅದನ್ನು ಯಾರಿಂದಲೂ ರಕ್ಷಿಸಲು ಸಾಧ್ಯವಿಲ್ಲ. ಅದಕ್ಕಾಗಿ ಈ ರೀತಿಯ ವಿಕೃತ ಭಾವನೆ ಬೆಳೆಯದಂತೆ ಮಾಡಬೇಕಾದ ಕೆಲಸ ಶಿಕ್ಷಣದಿಂದಲೇ ಸಾಧ್ಯ. ಅಂತಹ ಶಿಕ್ಷಣವನ್ನು ಎಳಮೆಂದಲೇ ನೀಡಬೇಕಾದ ಅನಿವಾರ್ಯತೆಯಿದೆ. ಆ ಕೆಲಸವನ್ನು ನಮ್ಮ ವಿದ್ಯಾಸಂಸ್ಥೆ ಮಾಡುತ್ತಿದೆ. ಪದವಿ ಹಂತದಲ್ಲೂ ಪ್ರಾರ್ಥನೆ, ಭಜನೆ, ಸಭ್ಯತೆ, ಸಂಸ್ಕಾರ ಮೂಡಿಸಲು ಸಾಧ್ಯವೆಂಬ ವಿಶ್ವಾಸವೂ ಬಂದಿದೆ. ಇದಕ್ಕೆ ಪೋಷಕರ ಸಹಕಾರ ಅಗತ್ಯವಿದೆ. ಕಾಲೇಜಿನ ಒಳಗಡೆ ವಿದ್ಯಾರ್ಥಿಗಳು – ಶಿಕ್ಷಕರು ಜೊತೆಗಿರುತ್ತಾರೆ. ಆದರೆ ಆಡಳಿತ ಮಂಡಳಿಯ ಜೊತೆಗೆ ಸೇರಿಕೊಂಡು ಪಾಲಕರೂ […]

ವಿದ್ಯಾರ್ಥಿಗಳಿಂದ ಕೃಷ್ಣ ವೇಷ

Tuesday, September 4th, 2018

ಶ್ರೀರಾಮ ಮಂದಿರ ಕಲ್ಲಡ್ಕ ಇಲ್ಲಿ ನಡೆದ 86ನೇ ವರ್ಷದ ಮೊಸರು ಕುಡಿಕೆ ಉತ್ಸವದಲ್ಲಿ  ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ವಿದ್ಯಾರ್ಥಿಗಳು ಕೃಷ್ಣ ವೇಷಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದರು  ಮತ್ತು ಶ್ರೀರಾಮ ಶಿಶುಮಂದಿರದ ಪುಟಾಣಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. Photo:  ವಿದ್ಯಾರ್ಥಿಗಳಿಂದ ಕೃಷ್ಣ ವೇಷ

ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆ

Tuesday, August 28th, 2018
ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆ

ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 28.8.2018ರಂದು ಪೋಷಕರ ಸಭೆ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಾ ಪ್ರಭಾಕರ ಭಟ್ ಮಾರ್ಗದರ್ಶನ ಮಾಡಿದರು. ವಿದ್ಯಾಕೇಂದ್ರದ ಅಧ್ಯಕ್ಷರು ಶ್ರೀ ಬಿ. ನಾರಾಯಣ ಸೋಮಯಾಜಿ, ಸಂಚಾಲಕರು ಶ್ರೀ ವಸಂತ ಮಾಧವ , ಸಹ ಸಂಚಾಲಕ ಶ್ರೀ ರಮೇಶ್ ಎನ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು ಶ್ರೀ ಚಂದ್ರಶೇಖರ ಸಾಲಯಾನ್, ಮುಖ್ಯೋಪಾಧ್ಯಾಯರು ಶ್ರೀ ರವಿರಾಜ್ ಕಣಂತೂರು, ಆಡಳಿತ ಮಂಡಳಿ ಸದಸ್ಯರು, ಶಾಲಾಭಿವೃದ್ದಿ ಸಮಿತಿ ಸದಸ್ಯರು, ಮಾತೃ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ […]

ಶ್ರೀರಾಮ ಪದವಿ ಕಾಲೇಜಿನಲ್ಲಿ ರಕ್ಷಾಬಂಧನ ಪ್ರದ್ಯೋತ ಸಂಸ್ಕೃತ ಸಂಘ ಉದ್ಘಾಟನೆ

Tuesday, August 28th, 2018
ಶ್ರೀರಾಮ ಪದವಿ ಕಾಲೇಜಿನಲ್ಲಿ ರಕ್ಷಾಬಂಧನ ಪ್ರದ್ಯೋತ ಸಂಸ್ಕೃತ ಸಂಘ ಉದ್ಘಾಟನೆ

ಕಲ್ಲಡ್ಕ, ಆ: 28, ಜಗತ್ತಿನಲ್ಲಿಯೇ ಭಾವನೆಯನ್ನು ತುಂಬಿಕೊಂಡಿರುವ ದೇಶ ಭಾರತ. ನೂರಾರು ಭಾಷೆ ಸಂಸ್ಕೃತಿಗಳಿದ್ದರೂ ಅದರದ್ದೇ ಆದ ವಿಶೇಷತೆಯ ಕಾರಣಕ್ಕೆ ಒಂದು ಬಹು ಸಂಸ್ಕೃತಿಯ ರಾಷ್ಟ್ರವಾಗಿ ಬೆಳೆದಿದೆ. ಶ್ರಾವಣ ಹುಣ್ಣಿಮೆಯ ದಿವಸ ಅಚರಿಸುವ ರಕ್ಷಾಬಂಧನವನ್ನು ಎಲೆ ಮರೆಯ ಕಾುಯಂತೆ ನಮ್ಮ ವಿದ್ಯಾ ಕೇಂದ್ರದ ಸ್ವಚ್ಛತಾ ಸಿಬ್ಬಂದಿ ವರ್ಗದವರೊಂದಿಗೆ ಆಚರಿಸಿಕೊಳ್ಳುತ್ತಿರುವುದು ಅದ್ಭುತವಾದ, ಭಾವನಾತ್ಮಕ ಕಾರ್ಯಕ್ರಮವಷ್ಟೇ ಅಲ್ಲದೇ ಹೊಸ ಕಲ್ಪನೆ ಹಾಗೂ ಯೋಜನೆಯಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. […]

ಪ್ರೌಢಶಾಲೆಯಲ್ಲಿ ಸಂಸ್ಕೃತೋತ್ಸವ ಹಾಗೂ ರಕ್ಷಾಬಂಧನ

Monday, August 27th, 2018

ದಿನಾಂಕ 27.8.2018 ಮನುಷ್ಯ ಹೇಗೆ ಬದುಕಬೇಕು, ಹಾಗೂ ಬದುಕಲು ಬೇಕಾದ ವಿಷಯವನ್ನು ವೇದದಲ್ಲಿ ನೀಡಲಾಗಿದೆ. ಜೀವನದಲ್ಲಿ ಯಾವುದೇ ಜ್ಞಾನ ಪಡೆಯಬೇಕಾದರೆ ಸಂಸ್ಕೃತದಿಂದ ಮಾತ್ರ ಸಾಧ್ಯ. ಸಂಸ್ಕೃತೋತ್ಸವ ಕಾರ್ಯಕ್ರಮ ಸಂಸ್ಕೃತ ಅರಿಯದಿರುವವರಿಗೆ, ಅರಿತುಕೊಳ್ಳಲು ಪ್ರೇರಣೆಯಾಗಲಿ ಎಂದು ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್‌ರವರು ಶ್ರೀರಾಮ ಪ್ರೌಢಶಾಲಾ ಸಂಸ್ಕೃತೋತ್ಸವದ ಕುರಿತು ಮಾತನಾಡಿದರು. ರಕ್ಷಾ ಬಂಧನ : ಜಾತಿ, ಭಾಷೆ, ಮತ, ಸಂಪ್ರದಾಯ, ವರ್ಣ ಹೇಗೆ ನೂರಾರು ರೀತಿಯ ಜನಾಂಗದವರು ಒಂದೇ ಎಂಬ ಜಾಗೃತಿ ಮೂಡಿಸಿ ಸಹೋದರತ್ವ, […]

ಪುಸ್ತಕ ವಿಮೋಚನಾ ಕಾರ್ಯಕ್ರಮ

Monday, August 27th, 2018

ದಿನಾಂಕ 27.8.2018 ಚುಟುಕು ಸಾಹಿತ್ಯ ಕೇವಲ ನಾಲ್ಕು ಗೆರೆಗಳನ್ನು ಹೊಂದಿದ್ದರೂ, ಅದರ ಪ್ರಭಾವ ನಾನಾ ಅರ್ಥಗಳನ್ನು ಹೊಂದಿದೆ. ಪ್ರಸ್ತುತ ಸಮಾಜಕ್ಕೆ ಅದರದ್ದೇ ಆದ ಪ್ರಭಾವ ಬೀರುತ್ತಿದೆ. ಇಂತಹ ಚುಟುಕುಗಳನ್ನು ನಮ್ಮ ವಿದ್ಯಾರ್ಥಿನಿ ರಚಿಸಿರುವುದು ಸಂತಸದ ಸಂಗತಿ ಹಾಗೂ ಇನ್ನೂ ಅನೇಕ ಕವನಗಳನ್ನು ರಚಿಸಿ ಸಾಹಿತ್ಯಕ್ಕೆ ಕೊಡುಗೆ ನೀಡುವಂತಾಗಲಿ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ|| ಪ್ರಭಾಕರ ಭಟ್ ಕಲ್ಲಡ್ಕ ಇವರು ವಿದ್ಯಾರ್ಥಿನಿ ಕು. ಕೀರ್ತನಾ ಇವರಿಗೆ ಶುಭಾಶೀರ್ವಾದ ಮಾಡಿದರು. ಇವರು ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದಲ್ಲಿ ನಡೆದ ೯ನೇ […]

ರಕ್ಷಾಬಂಧನ

Monday, August 27th, 2018

ದಿನಾಂಕ 27.08.2018ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ರಕ್ಷಾಬಂಧನ ಕಾರ್ಯಕ್ರಮವು ವಿಭಿನ್ನವಾಗಿ ಹಾಗೂ ವಿಶಿಷ್ಟವಾಗಿ ಆಚರಿಸಲಾಯಿತು. “ಒಂದೊಂದು ಹಬ್ಬವು ಒಂದೊಂದು ಸಂದೇಶವನ್ನು ನೀಡುತ್ತದೆ, ಮನುಷ್ಯರು ಒಬ್ಬರನ್ನೊಬ್ಬರು ರಕ್ಷಣೆ ಮಾಡುತ್ತಾ ನಾನು ನಿನ್ನನ್ನು – ನೀನು ನನ್ನನ್ನು ರಕ್ಷಿಸುವುದರ ಮೂಲಕ ಒಬ್ಬರನ್ನೊಬ್ಬರು ರಕ್ಷಿಸುತ್ತಾ, ಜೊತೆಯಲ್ಲಿ ದೇಶವನ್ನು ಕೂಡ ರಕ್ಷಿಸುವ” ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ|| ಪ್ರಭಾಕರ್ ಭಟ್ ಕಲ್ಲಡ್ಕ ಆಶಿಸಿದರು. “ಸಾಮೂಹಿಕವಾಗಿ ರಕ್ಷೆಯನ್ನು ಕಟ್ಟಿ ನಾವೆಲ್ಲರೂ ಒಂದಾಗಿ ಪರಸ್ಪರ […]

ಓಣಂ ಹಬ್ಬ ಆಚರಣೆ- ಪದವಿ ಕಾಲೇಜಿನಿಂದ ಸಂತ್ರಸ್ತ ಪರಿಹಾರ ನಿಧಿಗೆ ಸ್ಪಂದನೆ

Saturday, August 25th, 2018
ಓಣಂ ಹಬ್ಬ ಆಚರಣೆ- ಪದವಿ ಕಾಲೇಜಿನಿಂದ ಸಂತ್ರಸ್ತ ಪರಿಹಾರ ನಿಧಿಗೆ ಸ್ಪಂದನೆ

ಕಲ್ಲಡ್ಕ, ಆ:25, ಇತ್ತೀಚೆಗೆ ಸಂಭವಿಸಿದ ಭಾರಿ ಮಳೆಯ ಕಾರಣಕ್ಕೆ ನೆರೆ ಹಾಗೂ ಭೂಕುಸಿತದಿಂದ ತತ್ತರಿಸಿ ಹೋಗಿರುವ ಕೇರಳ ಮತ್ತು ಕೊಡವರ ಬಾಳು ದುಸ್ತರವಾಗಿದೆ. ಅವರುಗಳು ತಮ್ಮ ಸ್ವಂತ ಆಸ್ತಿ ಪಾಸ್ತಿ ಅಷ್ಟೇ ಅಲ್ಲದೇ ಅನೇಕ ಬಂಧು- ಭಾಂದವರನ್ನು ಕಣ್ಣೇದುರೇ ಕಳಕೊಳ್ಳುವ ಸ್ಥಿತಿ ಎಲ್ಲರನ್ನು ಕಂಗೆಡಿಸಿದೆ. ಇದು ಕೇವಲ ಸಹಾನುಭೂತಿಯಾಗಿ ಉಳಿಯದೇ ವಿವಿಧ ರೀತಿಯ ಆರ್ಥಿಕ ಸ್ಪಂದನೆಯ ಮೂಲಕ ಸಂತ್ರಸ್ತರಿಗೆ ನೆರವಾಗಬೇಕು. ಇದಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ನೀಡುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ಬದಲಾಗಿ ನಾವು ನಮ್ಮ ದೈನಂದಿನ […]

ವಿಜ್ಞಾನ ಮೇಳ

Saturday, August 25th, 2018
ವಿಜ್ಞಾನ ಮೇಳ

ದಿನಾಂಕ 23.08.2018 ರಂದು ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಆಯೋಜಿಸಿದ ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳದಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ ಬಾಲವರ್ಗದ ವಿಜ್ಞಾನ ಮಾದರಿಯಲ್ಲಿ 7ನೇ ತರಗತಿಯ ಸೌರಭ.ವಿ.ಎಸ್ ಪ್ರಥಮ, 6ನೇ ತರಗತಿಯ ಕುಶಿ-ಪ್ರಥಮ, ಹಾಗೂ 6ನೇ ತರಗತಿಯ ಶ್ರೀಜನ್ಯ ತೃತೀಯ ಸ್ಥಾನವನ್ನು ಗಳಿಸಿದರು. ಸಂಸ್ಕೃತ ಜ್ಞಾನ ರಸಪ್ರಶ್ನೆಯಲ್ಲಿ 7ನೇ ತರಗತಿಯ ಚರಣ್, ರ್ವಣಿ ಹಾಗೂ 6ನೇ ತರಗತಿಯ ದೀಕ್ಷಿತ್ ಪ್ರಥಮ ಸ್ಥಾನವನ್ನು ಪಡೆದವರಾಗಿರುತ್ತಾರೆ. […]

ಸಾಮೂಹಿಕ ಹುಟ್ಟು ಹಬ್ಬ ಆಚರಣೆ

Saturday, August 25th, 2018
ಸಾಮೂಹಿಕ ಹುಟ್ಟು ಹಬ್ಬ ಆಚರಣೆ

ದಿನಾಂಕ – 25.08.2018ನೇ ಶನಿವಾರ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಹನುಮಾನ್ ನಗರ ಕಲ್ಲಡ್ಕ ಇಲ್ಲಿನ ವೇದವ್ಯಾಸ ಧ್ಯಾನಮಂದಿರದಲ್ಲಿ ಜುಲೈ, ಆಗಸ್ಟ್ ತಿಂಗಳಲ್ಲಿ ಹುಟ್ಟಿದ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣ ಮತ್ತು ಭಜನಾ ಕಾರ್ಯಕ್ರಮವನ್ನು ಆಚರಿಸಲಾುತು. ಹುಟ್ಟುಹಬ್ಬವನ್ನು ಆಚರಿಸುವ ಮಕ್ಕಳಿಗೆ ಗುರುವೃಂದದವರಿಂದ ಆರತಿ ಅಕ್ಷತೆ ತಿಲಕಧಾರಣೆ, ಸಿಹಿ ವಿತರಣೆ ಹಾಗೂ ಭಾರತಮಾತೆಗೆ ಪುಷ್ಪಾರ್ಚನೆ ಮಾಡಿದರು. “ಹುಟ್ಟುಹಬ್ಬವನ್ನು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುವಂತಾಗಲಿ ಎಂದು ಆಶಿಸಿದರು ಹಾಗೂ ಪುರಾಣದ ಕಥೆಗಳಲ್ಲಿನ ಮಹಾಪುರುಷರ ಆದರ್ಶ […]