ದಿನಾಂಕ 13.03.2021 ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ನೂತನವಾಗಿ ಸೇರ್ಪಡೆಗೊಂಡ ವಿರ್ದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು. ಜೀವನ ಮೌಲ್ಯಗಳನ್ನು ತಿಳಿಸಬೇಕಾದುದು ಶಾಲೆಯ ಕರ್ತವ್ಯ. ಈ ಶಾಲೆಯು ಭಾರತೀಯ ಸನಾತನ ಮಾದರಿಯ ಶಿಕ್ಷಣವನ್ನು ಮಗುವಿಗೆ ಕೊಡುವ ಧ್ಯೇಯವನ್ನು ಇಟ್ಟುಕೊಂಡು ಮುಂದುವರಿಸುತ್ತಾ ಬಂದಿದೆ. ಇಲ್ಲಿ ರಾಷ್ಟ್ರೀಯತೆಯನ್ನು ಕಲಿಸಿಕೊಡುತ್ತದೆ. ಕನ್ನಡವನ್ನು ಮೂಲೆ ಗುಂಪಾಗಿಸುತ್ತಿರುವ ಈ ಕಾಲಘಟ್ಟದಲ್ಲಿ ಶ್ರೀರಾಮ ಶಾಲೆಯು 1000 ಕ್ಕೂ ಅಧಿಕ ಮಕ್ಕಳನ್ನು ಹೊಂದಿ ಭಾಷಾ ಮಾಧ್ಯಮದಲ್ಲೆ ಹೆಚ್ಚು ಮಕ್ಕಳನ್ನು ಹೊಂದಿದ ಶಾಲೆ ಎಂಬ ಹೆಗ್ಗಳಿಕೆಗೆ […]
ದಿನಾಂಕ ೦೨/೦೩/೨೦೨೧ ರಂದು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ೨೦೧೯-೨೦ ನೇ ಸಾಲಿನ ವಿದ್ಯಾರ್ಥಿಗಳ ದೀಪ ಪ್ರದಾನ ಕಾರ್ಯಕ್ರಮ ನಡೆಸಲಾಯಿತು. ಭಾರತ ಸನಾತನ ದೇಶ, ಈಗ ನಾಯಕನಾಗಿ ಭಾರತ ಎದ್ದು ನಿಂತಿದೆ, ಈ ಶಾಲೆಯಲ್ಲಿ ಕೇವಲ ವಿಷಯಗಳ ಶಿಕ್ಷಣ ನೀಡುತ್ತಿಲ್ಲ, ಜೊತೆಗೆ ತನ್ನ ಜೀವನ ಹೇಗಿರಬೇಕು ಎಂಬ ಬದುಕಿನ ಶಿಕ್ಷಣ ನೀಡುತ್ತಿದೆ. ಜೀವನದ ಮೌಲ್ಯಗಳನ್ನು ಅರಿತುಕೊಳ್ಳುವ ಶಿಕ್ಷಣ ಇಂದಿನ ಪೀಳಿಗೆಗೆ ದೊರಕಬೇಕು ಎಂಬ ನಿಟ್ಟಿನಲ್ಲಿ ಶ್ರೀರಾಮ ವಿದ್ಯಾಸಂಸ್ಥೆ ಕಾರ್‍ಯನಿರ್ವಹಿಸುತ್ತಿದೆ. ತಾನು ಕಲಿತ ಮೌಲ್ಯವನ್ನು, ಸಂಸ್ಕಾರವನ್ನು […]
ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಕಲ್ಲಡ್ಕ ‘ಶಕುಂತಲಾದೇವಿ’ ಗಣಿತ ಶಾಸ್ತ್ರ ಪ್ರಯೋಗಶಾಲೆಯ ಉದ್ಘಾಟನೆಯನ್ನು ಕಿಯೋನಿಕ್ಸ್ ಸಂಸ್ಥೆಯ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ ಮಾಡಿದರು. ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ರಾಜು ಮೊಗವೀರ ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ್ ಭಟ್ ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕರಾದ ವಸಂತ ಮಾದವ, ಆಡಳಿತ ಮಂಡಳಿಯ ಸದಸ್ಯರಾದ ನಾಗೇಶ್ ಇರಾ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಪ್ರಸಾದ ಕಾಯರ್ ಕಟ್ಟೆ ಉಪಸ್ಥಿತರಿದ್ದರು. ಉಪನ್ಯಾಸಕರಾದ ಕವಿತಾ ಸ್ವಾಗತಿಸಿ ಕು.ಹರ್ಷಿತಾ ವಂದಿಸಿ […]
ಶ್ರೀರಾಮ ಪ್ರೌಢಶಾಲೆಯಲ್ಲಿ ಆಗತ ಸ್ವಾಗತ ಕಾರ್‍ಯಕ್ರಮ 16.02.2021 ಮಂಗಳವಾರ ಶ್ರೀರಾಮ ಪ್ರೌಢಶಾಲೆಯಲ್ಲಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಆಗತ ಸ್ವಾಗತ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನೂತನ ವಿದ್ಯಾರ್ಥಿಗಳಿಗೆ ಶಿಕ್ಷಕರು ಆರತಿ ಬೆಳಗಿದರು. ನಂತರ ಎಲ್ಲಾ ವಿದ್ಯಾರ್ಥಿಗಳು ಘೃತಾ ಸಮರ್ಪಣೆ ಹಾಗೂ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಹಿರಿಯರಿಂದ ಆಶೀರ್ವಾದ ಪಡೆದುಕೊಂಡರು. ಎಲ್ಲಾ ಗಣ್ಯರು ವಿದ್ಯಾರ್ಥಿಗಳಿಗೆ ತಿಲಕವಿಟ್ಟು ಆಶೀರ್ವದಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಕಾರ್‍ಕಕ್ರಮವನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ […]
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ಪದವಿ ವಿದ್ಯಾಲಯದ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಸನ್ಮಾನ್ಯ ಶ್ರೀ ಡಿ.ವಿ ಸದಾನಂದ ಗೌಡ ಇವರ ಉಪಸ್ಥಿತಿಯಲ್ಲಿ ಉಚಿತ ಲ್ಯಾಪ್‌ಟಾಪ್ ವಿತರಿಸಲಾಯಿತು. ಅಧ್ಯಕ್ಷತೆಯನ್ನು ಡಾ| ಪ್ರಭಾಕರ ಭಟ್, ಕಲ್ಲಡ್ಕ ಅಧ್ಯಕ್ಷರು, ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇವರು ವಹಿಸಿದ್ದರು. ಮಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ರಾಜೇಶ್ ನಾಕ್ ಯು. ಶಾಸಕರು, ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಡಾ| ಎಂ.ಎನ್. ರಾಜೇಂದ್ರಕುಮಾರ್ ಅಧ್ಯಕ್ಷರು, ಕ.ರಾ.ಸ.ಮಾ.ಮ.ನಿ.ಬೆಂಗಳೂರು., ನಿರ್ದೇಶಕರು, ಇಫ್ಕೋ ನವದೆಹಲಿ, ಅಧ್ಯಕ್ಷರು ದ.ಕ.ಜಿಲ್ಲಾ […]
ಶ್ರೀರಾಮ ಶಿಶುಮಂದಿರ ಕಲ್ಲಡ್ಕ ಇದರ ವತಿಯಿಂದ ಉತ್ಥಾನ ದ್ವಾದಶಿ ನಿಮಿತ್ತ ಶ್ರೀರಾಮ ವಿದ್ಯಾಕೇಂದ್ರದಲ್ಲಿ ತುಳಸಿ ಪೂಜೆ ಹಾಗೂ ಗೋಪೂಜೆ ನೆರವೇರಿತು. ಪೂಜಾ ಕಾರ್‍ಯಕ್ರಮವನ್ನು ಸೂರ್‍ಯಭಟ್ ಕಶೆಕೋಡಿ ಇವರು ನಡೆಸಿಕೊಟ್ಟರು. ಡಾ. ಪ್ರಭಾಕರ ಭಟ್ ದಂಪತಿಗಳು ಗೋವುಗಳಿಗೆ ಆರತಿ ಬೆಳಗಿ, ಹೂಹಾರ ಹಾಕಿ, ಬಾಳೆಹಣ್ಣು, ದೋಸೆಯನ್ನು ತಿನ್ನಿಸಿದರು. ಈ ಸಂದರ್ಭದಲ್ಲಿ ಸಂಚಾಲಕರು ವಸಂತ ಮಾಧವ, ವಿಭಾಗದ ಮುಖ್ಯಸ್ಥರುಗಳು, ಅಧ್ಯಾಪಕ ವೃಂದ, ಹಾಗೂ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
ಪ್ರಧಾನಿ ಮೋದಿ ಅವರ ಆಶಯದಂತೆ, ಆತ್ಮ ನಿರ್ಭರ ಭಾರತದ ಕನಸಿಗನುಗುಣವಾಗಿ ಈ ಬಾರಿಯ ದೀಪಾವಳಿಯನ್ನು ವಿಭಿನ್ನವಾಗಿ ಆಚರಿಸಲು ಪಣ ತೊಟ್ಟಿರುವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಸ್ವದೇಶಿ ಹಣತೆ ತಯಾರಿಸುವ ಕಾರ್ಯಾಗಾರವನ್ನು ಆಯೋಜಿಸಿದ್ದಾರೆ. 4 ನವೆಂಬರ್ 2020- 10 ನವೆಂಬರ್ 2020 ರ ವರೆಗೆ, ಒಂದು ವಾರದ ಅವಧಿಯಲ್ಲಿ ಸಂಸ್ಥೆಯ ಎರಡು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ ಹತ್ತು ಸಾವಿರಕ್ಕೂ ಹೆಚ್ಚಿನ ಹಣತೆಗಳನ್ನು ತಯಾರಿಸುವ ಕಾರ್ಯಕ್ರಮ ಇದಾಗಿದೆ. ವಿದ್ಯಾಕೇಂದ್ರಗಳು ಸಾಮಾಜಿಕ ಪರಿವರ್ತನೆಯ ಕೇಂದ್ರಗಳಾಗಬೇಕು. ಈ ದೀಪಾವಳಿ ಸಂದರ್ಭದಲ್ಲಿ […]