ಲಾಕ್ ಡೌನ್ ಸಂದರ್ಭದಲ್ಲಿ ಸೇವಾ ಚಟುವಟಿಕೆ

Saturday, July 18th, 2020

ಶಿಕ್ಷಣದ ಹೆಸರಿನಲ್ಲಿ ವ್ಯಾಪಾರ, ಆಂಗ್ಲ ಮಾಧ್ಯಮವೇ ಶ್ರೇಷ್ಠ ಎಂಬ ಮನೋಭಾವ, ಹೊರಲಾರದಷ್ಟು ಪುಸ್ತಕಗಳು, ಹೋಂವರ್ಕ್ ಹೊರೆ, ಅಂಕಗಳಿಕೆಗಾಗಿ ನಾಗಲೋಟ ಇದು ಇಂದಿನ ಸಾಮಾನ್ಯ ದೃಶ್ಯ *ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿರುವ ಶ್ರೀರಾಮ ವಿದ್ಯಾಕೇಂದ್ರ ಶಿಕ್ಷಣ ಸಂಸ್ಥೆ. ಇಲ್ಲಿನ ಶಿಕ್ಷಣದಲ್ಲಿ ಭಾರತೀಯತೆ ಇದೆ. ವ್ಯಕ್ತಿತ್ವ ವಿಕಾಸಕ್ಕಾಗಿ ನಡವಳಿಕೆಯ ಸತ್ಸಂಸ್ಕಾರವಿದೆ. ಜೀವನ ಮೌಲ್ಯವಿದೆ. ಆಧ್ಯಾತ್ಮಿಕ ಚಿಂತನೆ ಇದೆ. ಸೃಜನಶೀಲತೆ ಇದೆ. ಪ್ರತಿಭೆಗೆ ಪ್ರೋತ್ಸಾಹವಿದೆ. ಸಮಾಜ ಸೇವೆ ಇದೆ. ದೇಶಭಕ್ತ ವ್ಯಕ್ತಿಗಳ ನಿರ್ಮಾಣ ಕಾರ್ಯ ನಿರಂತರವಾಗಿದೆ……………..* ಯಾ ವಿದ್ಯಾ ಸಾ ವಿಮುಕ್ತಯೇ* ಮಹಾಮಾರಿ […]

ಶ್ರೀರಾಮ ಪದವಿ ಪೂರ್ವ ವಿದ್ಯಾಲಯ- 93% ಫಲಿತಾಂಶ:

Friday, July 17th, 2020
ಶ್ರೀರಾಮ ಪದವಿ ಪೂರ್ವ ವಿದ್ಯಾಲಯ- 93% ಫಲಿತಾಂಶ:

2019-20ನೇ ಸಾಲಿನ ದ್ವಿತೀಯ ಪಿ.ಯು.ಸಿಯ  ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಈ ಪೈಕಿ ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ  303 ವಿದ್ಯಾರ್ಥಿಗಳ ಪೈಕಿ 282  ವಿದ್ಯಾರ್ಥಿಗಳು  ತೇರ್ಗಡೆಗೊಂಡು 47 ವಿಶಿಷ್ಟ ಶ್ರೇಣಿ, 179 ಪ್ರಥಮ ಶ್ರೇಣಿ ಪಡೆದು 93%  ಫಲಿತಾಂಶ ಸಾಧಿಸಿದೆ. ವಿಜ್ಞಾನ ವಿಭಾಗದಲ್ಲಿ ಸೌಮ್ಯ 571, ವಾಣಿಜ್ಯ ವಿಭಾಗದಲ್ಲಿ ನವ್ಯ 571, ಕಲಾ ವಿಭಾಗದಲ್ಲಿ ಭಾಗೇಶ್ 517 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 205 ವಿದ್ಯಾರ್ಥಿಗಳ ಪೈಕಿ 35 ಅತ್ಯುನ್ನತ ಶ್ರೇಣಿ, […]

ಶ್ರೀರಾಮ ಪದವಿ ಕಾಲೇಜಿನಲ್ಲಿ ಅಂತರ್ ಕಾಲೇಜು ಮಹಿಳಾ ವಾಲಿಬಾಲ್

Friday, February 28th, 2020
ಶ್ರೀರಾಮ ಪದವಿ ಕಾಲೇಜಿನಲ್ಲಿ ಅಂತರ್ ಕಾಲೇಜು ಮಹಿಳಾ ವಾಲಿಬಾಲ್

ಶ್ರೀರಾಮ ಪದವಿ ಕಾಲೇಜಿನಲ್ಲಿ ಅಂತರ್ ಕಾಲೇಜು ಮಹಿಳಾ ವಾಲಿಬಾಲ್ ಪಂದ್ಯಾಟ ಉದ್ಘಾಟನೆ ಬಂಟ್ವಾಳ, ಫೆ.೨೮: ಕ್ರೀಡೆಯು ಜೀವನದ ಒಂದು ಅವಿಭಾಜ್ಯ ಅಂಗ. ಇದರಿಂದ ಜೀವನ ಮೌಲ್ಯವು ಹೆಚ್ಚುವುದು. ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳೇ ಕ್ರೀಡೆಯಲ್ಲಿ ಮುಂಚೂಣಿಯಲ್ಲಿರುವುದು ನಮ್ಮ ಕ್ರೀಡಾಲೋಕಕ್ಕೆ ಸಲ್ಲಬೇಕಾದ ಗೌರವ. ಕ್ರೀಡೆಯು ಸಕಾರಾತ್ಮಕ ಸ್ಪರ್ಧಾ ಮನೋಭಾವವನ್ನು ಪ್ರತೀ ಸ್ಫರ್ಧಾಳುಗಳಲ್ಲಿ ಮೂಡಿಸುವುದರ ಜೊತೆಗೆ ಸೋಲು ಗೆಲುವುಗಳಲ್ಲೂ ಸಮಾನವಾಗಿ ಸ್ವೀಕರಿಸಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ| ಕಿಶೋರ್ ಕುಮಾರ್ ಸಿ ಕೆ ಇವರು ಮಂಗಳೂರು […]

ಶ್ರೀಗುರುಜಿ ಜನ್ಮ ದಿನಾಚರಣೆ – ಸಾಮೂಹಿಕ ಸಹಭೋಜನ

Saturday, February 22nd, 2020

ಶ್ರೀ ಗುರೂಜಿ ಜನ್ಮದಿನಾಚರಣೆಯ ನಿಮಿತ್ತ ಹಲವು ಕಾರ್ಯಕ್ರಮಗಳು

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಸೂರ್ಯನಮಸ್ಕಾರ – ರಥಸಪ್ತಮಿ

Saturday, February 1st, 2020
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಸೂರ್ಯನಮಸ್ಕಾರ - ರಥಸಪ್ತಮಿ

ಫೆ ೧: ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಸೂರ್ಯನಮಸ್ಕಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು ಒಟ್ಟಾಗಿ ಮೈದಾನದಲ್ಲಿ ಸೇರಿ ರಥಸಪ್ತಮಿ ನಿಮಿತ್ತ ಸಾಮೂಹಿಕ ಸೂರ್ಯನಮಸ್ಕಾರ ಮಾಡಿದರು. ಯೋಗ ಶಿಕ್ಷಕರಾದ ಸಂಜಯ್ ವಿದ್ಯಾರ್ಥಿಗಳಿಗೆ ಮಂತ್ರಸಹಿತ ಸೂರ್ಯನಮಸ್ಕಾರ ಮಾಡಿಸಿದರು. ಆವಿಷ್ಕಾರ್ ಯೋಗ ತರಬೇತುದಾರರಾದ ವಿಶಿತ್ ವಿ ದೇರಳಕಟ್ಟೆ ಇವರು ರಥಸಪ್ತಮಿ ದಿನದ ಮಹತ್ವವನ್ನು ತಿಳಿಸಿಕೊಟ್ಟರು. ವೇದಿಕೆಯಲ್ಲಿ ಕಬಕ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೇಮಲತಾ, ಹಿರಿಯರಾದ ಡಾ| ಕಮಲಾ […]

ಹಿರಿಯ ವಿದ್ಯಾರ್ಥಿಗಳ ಸಮಾವೇಶ- ಸ್ನೇಹ ಸಂಗಮ

Tuesday, January 21st, 2020
ಹಿರಿಯ ವಿದ್ಯಾರ್ಥಿಗಳ ಸಮಾವೇಶ- ಸ್ನೇಹ ಸಂಗಮ

ಶ್ರೀರಾಮ ಕಾಲೇಜಿನಲ್ಲಿ ಉದ್ಯೋಗ ಮೇಳ

Saturday, November 30th, 2019
ಶ್ರೀರಾಮ ಕಾಲೇಜಿನಲ್ಲಿ ಉದ್ಯೋಗ ಮೇಳ

ಸಾಹಿತಿ ಡಾ ಚಂದ್ರಶೇಖರ ಕಂಬಾರರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ

Saturday, November 30th, 2019

ಸಾಹಿತಿ ಡಾ ಚಂದ್ರಶೇಖರ ಕಂಬಾರರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ಇಲ್ಲಿನ ಶಿಕ್ಷಣದ ಗುಣಮಟ್ಟ ನೋಡಿ ನಮ್ಮ ದೇಶದ ಬಗ್ಗೆ ಹೊಸಭರವಸೆ ಮೂಡಿದೆ. ಪ್ರಪಂಚವಿಡೀ ಸುತ್ತಿದ್ದರೂ, ಇಡೀ ಪ್ರಪಂಚಕ್ಕೆ ಕತೆಯನ್ನು ತಿಳಿಸಿದವರು ಭಾರತೀಯರು. ನಾವು ಕತೆಪುಸ್ತಕವನ್ನು ಓದುವುದು, ಪ್ರಪಂಚಕ್ಕೆ ಕತೆ ಹೇಳುವುದನ್ನು ಕಲಿಸಿದವರು. 1600 ಭಾಷೆಗಳು, 6400 ಜಾತಿ, 34 ಕೋಟಿ ದೇವತೆಗಳು ಎಲ್ಲವೂ ಇದ್ದರೂ ಹತ್ತು ಸಾವಿರ ವರ್ಷಗಳ ಹಿಂದಿನ ಐತಿಹ್ಯವನ್ನು ಹೊಂದಿದೆ. ದುರ್ದೈವ ಎಂದರೆ ಭಾರತೀಯ ಸಂಸ್ಕ್ರತಿಯನ್ನು ಆಂಗ್ಲ ಮಾಧ್ಯಮ ಶಿಕ್ಷಣವು ನಾಶಗೊಳಿಸುತ್ತಿದೆ. ಇಂತಹ […]

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಶೈಕ್ಷಣಿಕ ಮತ್ತು ಮಕ್ಕಳ ವೃತ್ತಿಶಿಕ್ಷಣ ಕಲಿಕೋತ್ಸವ 7.11.2019 , 8.11.2019

Thursday, November 7th, 2019
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಶೈಕ್ಷಣಿಕ ಮತ್ತು ಮಕ್ಕಳ ವೃತ್ತಿಶಿಕ್ಷಣ ಕಲಿಕೋತ್ಸವ 7.11.2019 , 8.11.2019

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ (ರಿ), ಸರ್ವಶಿಕ್ಷಣ ಅಭಿಯಾನ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖಾ ವೃತ್ತಿ ಶಿಕ್ಷಣ ಶಿಕ್ಷಕರ ಸಂಘ(ರಿ) ಬೆಂಗಳೂರು-ದಕ್ಷಿಣ ಶಾಲಾ ಹಾಗೂ ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇವರ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಶೈಕ್ಷಣಿಕ ಹಾಗೂ ಮಕ್ಕಳ ವೃತ್ತಿ ಶಿಕ್ಷಣ ಕಲಿಕೋತ್ಸವ 2019-20 ಕಾರ್‍ಯಕ್ರಮ

Kannada Rajyotsava

Saturday, November 2nd, 2019
Kannada Rajyotsava