ನೂತನ ಗಣಕ ವಿಜ್ಞಾನ ಕೊಠಡಿ ಉದ್ಘಾಟನೆ 15.11.2021

Tuesday, November 30th, 2021
ನೂತನ ಗಣಕ ವಿಜ್ಞಾನ ಕೊಠಡಿ ಉದ್ಘಾಟನೆ 15.11.2021

ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇಲ್ಲಿ ‘ಕಣಾದ, ಎಂಬ ಹೆಸರಿನ 60 ಕಂಪ್ಯೂಟರ್‌ಗಳನ್ನು ಇಡುವುದಕ್ಕೆ ವ್ಯವಸ್ಥೆ ಇರುವ ನೂತನ ಗಣಕ ವಿಜ್ಞಾನ ಕೊಠಡಿಯನ್ನು ಮಂಗಳೂರಿನ ಇನ್ಫೋಸಿಸ್ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥರಾದ ಶ್ರೀ ವಾಸುದೇವ ಕಾಮತ್ ಇವರು ದೀಪ ಬೆಳಗಿಸಿ, ವಿಶ್ವದ ಪ್ರಪ್ರಥಮ ಅಣುವಿಜ್ಞಾನಿ ಕಣಾದ ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ, ವಿಶ್ವದ ಪ್ರಪ್ರಥಮ ವಿಜ್ಞಾನಿ ಕಣಾದ ಇವರ ಬಗ್ಗೆ ಮಾಹಿತಿಯನ್ನು […]

ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದಲ್ಲಿ ಆಗತ ಸ್ವಾಗತ ಕಾರ್‍ಯಕ್ರಮ ದಿನಾಂಕ 15.11.2021

Tuesday, November 30th, 2021
ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದಲ್ಲಿ ಆಗತ ಸ್ವಾಗತ ಕಾರ್‍ಯಕ್ರಮ ದಿನಾಂಕ 15.11.2021

ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದಲ್ಲಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಸ್ವಾಗತಿಸುವ ವಿನೂತನ ಕಾರ್‍ಯಕ್ರಮ ಆಗತ ಸ್ವಾಗತ ಕಾರ್ಯಕ್ರಮ ಮಧುಕರ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಇನ್ಫೋಸಿಸ್ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥರಾದ ಶ್ರೀ ವಾಸುದೇವ ಕಾಮತ್ ಮತ್ತು ಹಿರಿಯ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀಹರಿ ಹಾಗೂ ಶ್ರೀ ವಿಶ್ವಶ್ರೀ ಕ್ಷೇತ್ರ ಮಹಾಸಂಸ್ಥಾನ ಬೆಂಗಳೂರು ಇಲ್ಲಿನ ಸಂಸ್ಥಾಪಕ ಧರ್ಮಾಧಿಕಾರಿಗಳಾದ ಉಮೇಶ ಶರ್ಮ ಉಪಸ್ಥಿತರಿದ್ದು, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಾ| ಪ್ರಭಾಕರ ಭಟ್ […]

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಕನ್ನಡ ರಾಜ್ಯೋತ್ಸವ

Monday, November 1st, 2021
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಕನ್ನಡ ರಾಜ್ಯೋತ್ಸವ

ಶ್ರೀರಾಮ ವಿದ್ಯಾಕೇಂದ್ರದ ಕನ್ನಡ ರಾಜ್ಯೋತ್ಸವದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಧ್ವಜಾರೋಹಣ ಮಾಡಿದರು. ಅಸ್ತಿತ್ವ ಪ್ರತಿಷ್ಠಾನ ಇದರ ಪ್ರಧಾನ ಸಂಚಾಲಕರಾದ ಎಸ್.ಎಂ. ಉಡುಪ ಕನ್ನಡ ರಾಜ್ಯೋತ್ಸವದ ನಿಮಿತ್ತ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ೭೫ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಅಸ್ತಿತ್ವ ಪ್ರತಿಷ್ಠಾನವು ವಿದ್ಯಾರ್ಥಿಗಳಿಗೆ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಹಾಗೂ ಗೀತ ಭಾರತಿ ನಡೆಸಿದ ದೇಶಭಕ್ತಿಗೀತೆ ಗಾಯನ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ವಿತರಿಸಿ ಗೌರವಿಸಿದರು. ಈ […]

ರಾಷ್ಟ್ರೀಯ ಶಿಕ್ಷಣ ನೀತಿ 2020 ಇದರ ಬಗ್ಗೆ ಕಾರ್ಯಾಗಾರ

Saturday, October 30th, 2021
ರಾಷ್ಟ್ರೀಯ ಶಿಕ್ಷಣ ನೀತಿ 2020 ಇದರ ಬಗ್ಗೆ ಕಾರ್ಯಾಗಾರ

ಕಲ್ಲಡ್ಕ ಅ೩೦: ರಾಷ್ಟೀಯ ಶಿಕ್ಷಣ ನೀತಿಯ ಬಗ್ಗೆ ಶಿಕ್ಷಕರಿಗೆ ಕಾರ್‍ಯಾಗಾರ ಶ್ರೀರಾಮ ವಿದ್ಯಾಕೇಂದ್ರದ ಸಾಧನಾ ಸಭಾಭವನದಲ್ಲಿ ದಿನಾಂಕ 30.10.2021ರಂದು ರಾಷ್ಟ್ರೀಯ ಶಿಕ್ಷಣ ನೀತಿ 2020 ಇದರ ಬಗ್ಗೆ ಕಾರ್ಯಾಗಾರ ನಡೆಯಿತು.ಕಾರ್‍ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಖ್ಯಾತ ಅಂಕಣಕಾರರು ಹಾಗೂ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥ ಮಾತನಾಡುತ್ತಾ ಒಂದು ದೇಶವು ಉತ್ತಮ ರೀತಿಯಲ್ಲಿ ಅಭಿವೃದ್ದಿ ಹೊಂದಬೇಕಾದರೆ ಅಲ್ಲಿನ ಶಿಕ್ಷಣ ವ್ಯವಸ್ಥೆ ಉತ್ತಮವಾಗಿರಬೇಕು. ಹಾಗೂ ಎಲ್ಲರಿಗೂ ಅವರ ಆಸಕ್ತಿಗನುಗುಣವಾಗಿ ಶಿಕ್ಷಣ ದೊರೆಯಬೇಕು. ಎಂದು ಹೇಳುತ್ತಾ ನೂತನ ಶಿಕ್ಷಣ […]

ರಾಷ್ಟ್ರೀಯ ಶಿಕ್ಷಣ ನೀತಿ – ಹೊಸತನಕ್ಕೆ ತೆರೆದುಕೊಳ್ಳುವ ಅವಕಾಶ- ಡಾ| ಪ್ರಭಾಕರ ಭಟ್ ಕಲ್ಲಡ್ಕ

Saturday, October 23rd, 2021
ರಾಷ್ಟ್ರೀಯ ಶಿಕ್ಷಣ ನೀತಿ - ಹೊಸತನಕ್ಕೆ ತೆರೆದುಕೊಳ್ಳುವ ಅವಕಾಶ- ಡಾ| ಪ್ರಭಾಕರ ಭಟ್ ಕಲ್ಲಡ್ಕ

ರಾಷ್ಟ್ರೀಯ ಶಿಕ್ಷಣ ನೀತಿಯು ಆಧುನಿಕ ಸವಾಲುಗಳನ್ನು ಎದುರಿಸಲು ಅವಶ್ಯವಿರುವ ಎಲ್ಲಾ ಬದಲಾವಣೆಗಳಿಗೆ ಒಡ್ಡಿಕೊಳ್ಳಲು ಸಮರ್ಥವಾಗಿದೆ. ಇಂದು ಶಿಕ್ಷಣದ ಜೊತೆಗೆ ಉದ್ಯೋಗವಕಾಶಗಳು ಅನಿವಾರ್ಯವಾದುದರಿಂದ ಅದನ್ನು ಮನಗಂಡು ಅದಕ್ಕೆ ಸರಿಯಾಗಿ ಪಠ್ಯಕ್ರಮ ರಚನೆ ನಡೆದಿದ್ದು ಕಂಪ್ಯೂಟರ್ ವಿಜ್ಞಾನಕ್ಕೆ ವಿಶೇಷ ಒತ್ತು ನೀಡಲಾಗಿದೆ ಎಂದು ಕಲ್ಲಡ್ಕದ ಶ್ರೀರಾಮ ಪದವಿ ಕಾಲೇಜಿನ ಬಿಸಿಎ ಸೇತುಬಂಧ ತರಗತಿ ಟೆಕ್‌ವಿಷನ್ ಉದ್ಘಾಟಿಸಿ ಸಂಸ್ಥೆಯ ಸಂಸ್ಥಾಪಕರು, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಆಶಯ ನುಡಿಗಳನ್ನಾಡಿದರು. ೧೯೮೦ರ ದಶಕದಲ್ಲಿ ಗ್ರಾಮೀಣ […]

ಶಿಕ್ಷಕ ಪ್ರಶಿಕ್ಷಣ ಕಾರ್ಯಗಾರದ ಸಮಾರೋಪ

Saturday, October 23rd, 2021
ಶಿಕ್ಷಕ ಪ್ರಶಿಕ್ಷಣ ಕಾರ್ಯಗಾರದ ಸಮಾರೋಪ

ಅಧ್ಯಾಪಕರ “ಶಿಕ್ಷಕ ಪ್ರಶಿಕ್ಷಣ ಕಾರ್ಯಗಾರ”ದ ಸಮಾರೋಪ ಸಮಾರಂಭವು ದಿನಾಂಕ 19.10.2021 ರಂದು ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರೇರಣಾ ಸಭಾಭವನದಲ್ಲಿ ನಡೆಯಿತು. ಖ್ಯಾತ ಪಶುವೈದ್ಯರು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾದ ಡಾ. ಕೃಷ್ಣಭಟ್ ಕೊಂಕೋಡಿ ಮಾತನಾಡುತ್ತಾ, “ಕೊರೋನದ ರಜೆಯಿಂದಾಗಿ ಜಡ ಹಿಡಿದಿರುವ ವಿದ್ಯಾರ್ಥಿಗಳ ಮನಸ್ಸನ್ನು ಚಟುವಟಿಕೆಯಾಧಾರಿತ ಶಿಕ್ಷಣದ ಮೂಲಕ ಮತ್ತೆ ಚೈತನ್ಯಗೊಳಿಸಬೇಕು. ಶಿಕ್ಷಕರು ವಿದ್ಯಾರ್ಥಿಗಳ ಮನಸ್ಸನ್ನು ಪ್ರೀತಿಯ ಸಂವೇದನೆಯ ಮೂಲಕ ಹೇಗೆ ನೆನಪಿನಲ್ಲಿಡುವಂತೆ ಮಾಡಬಹುದು ಎಂಬುದನ್ನು ತಮ್ಮ ಅನುಭವಗಳನ್ನು ಉದಾಹರಣೆಯಾಗಿಸುತ್ತ ವಿವರಿಸಿದರು. ಕಾರ್ಯಗಾರದ ಚಿಂತನ ಅವಧಿಯನ್ನು ಶಿಕ್ಷಣದಲ್ಲಿ […]

ರಾಷ್ಟ್ರೀಯ ಪೋಷಣೆ ಅಭಿಯಾನ್

Saturday, October 2nd, 2021
ರಾಷ್ಟ್ರೀಯ ಪೋಷಣೆ ಅಭಿಯಾನ್

ಶ್ರೀರಾಮ ಪ್ರೌಢಶಾಲೆಯ ವತಿಯಿಂದ ವಿವಿಧ ಗ್ರಾಮಗಳಲ್ಲಿ ರಾಷ್ಟ್ರೀಯ ಪೋಷಣೆ ಅಭಿಯಾನ್ ಕಾರ್‍ಯಕ್ರಮ ನಡೆಸಲಾಯಿತು. ಸಜೀಪದ ಮಾಚಿದೇವ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ| ಸುಬ್ರಹ್ಮಣ್ಯ ಭಟ್ ಆಯುರ್ವೆದ ತಜ್ಞರು ಇವರು ಸಮತೋಲಿತ ಆಹಾರದ ಮಾಹಿತಿ ನೀಡಿ ಅಪೌಷ್ಟಿಕತೆ ನಿವಾರಣೆಗೆ ನಮ್ಮಲ್ಲಿಯೇ ದೊರೆಯುವ ಸಮತೋಲಿತ ಆಹಾರದ ಅಗತ್ಯತೆ ಬಗ್ಗೆ ಮಾತನಾಡಿದರು. ೪೦ ಮಹಿಳೆಯರು ಉಪಸ್ಥಿತರಿದ್ದರು.ನೆಟ್ಲ ಸರಸ್ವತಿ ಸದನದಲ್ಲಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿನಿ ಆಯುರ್ವೇದ ವೈದ್ಯೆ ಡಾ| ಸಿಂಧು ಶ್ರೀ ಇವರು ಅಪೌಷ್ಟಿಕತೆ ನಿವಾರಿಸಲು ಯಾವ ಯಾವ ಆಹಾರಗಳನ್ನು ಮಕ್ಕಳು […]

ಪ್ರೌಢಶಾಲೆಯಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಕಾರ್ಯಕ್ರಮ

Saturday, October 2nd, 2021
ಪ್ರೌಢಶಾಲೆಯಲ್ಲಿ  ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಕಾರ್ಯಕ್ರಮ

ಶ್ರೀರಾಮ ಪ್ರೌಢಶಾಲೆಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಗಾಂಧಿ ಜಯಂತಿ ಕಾರ್ಯಕ್ರಮವು ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾಂಭವಿ ಮಾತಾಜಿ ಮತ್ತು ಎಲ್ಲಾ ಅಧ್ಯಾಪಕರ ಉಪಸ್ಥಿತಿಯಲ್ಲಿ ನಡೆಯಿತು ಕಾರ್ಯಕ್ರಮದಲ್ಲಿ ಶ್ರೀ ಜಿನ್ನಪ್ಪ ಶ್ರೀಮಾನ್ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಗಾಂಧೀಜಿಯವರ ವ್ಯಕ್ತಿತ್ವದ ಆದರ್ಶ ಮೌಲ್ಯಗಳನ್ನು ತಿಳಿಸಿದರು ಶಾಂಭವಿ ಮಾತಾಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಮತ್ತು ಗಾಂಧೀಜಿಯವರ ಆದರ್ಶಗಳನ್ನು ನಾವು ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದು ಕರೆ ನೀಡಿದರು ಕಾರ್ಯಕ್ರಮವು ಸರಸ್ವತಿ ವಂದನೆಯೊಂದಿಗೆ ಆರಂಭವಾಗಿ ಶಾಂತಿ […]

ಆಜಾದಿ ಕಾ ಅಮೃತ್ ಮಹೋತ್ಸವ

Saturday, October 2nd, 2021
ಆಜಾದಿ ಕಾ ಅಮೃತ್ ಮಹೋತ್ಸವ

75ನೇ ಸ್ವಾತಂತ್ರ್ಯ ದಿನೋತ್ಸವದ ನೆನಪಿಗಾಗಿ ಫಿಟ್ ಇಂಡಿಯಾ ಮಿಷನ್, ಫಿಟ್ ಇಂಡಿಯಾ ಫ್ರೀಡಂ-2.0 ಇದರ ಪರಿಕಲ್ಪನೆಯೊಂದಿಗೆ ‘ಆಜಾದಿ ಕಾ ಅಮೃತ್ ಮಹೋತ್ಸವ’ ಕಾರ್‍ಯಕ್ರಮ ಶ್ರೀರಾಮ ಫ್ರೌಢಶಾಲೆಯಲ್ಲಿ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ|| ಪ್ರಭಾಕರ ಭಟ್ ಕಲ್ಲಡ್ಕ ಇವರು ಧ್ವಜ ಹಾರಿಸುವ ಮೂಲಕ ಕಾರ್‍ಯಕ್ರಮಕ್ಕೆ ಚಾಲನೆ ನೀಡಿದರು. ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹಿರಣ್ಮಯಿ, ವಿದ್ಯಾಕೇಂದ್ರದ ಸಂಚಾಲಕರು ವಸಂತ ಮಾಧವ, ಸಹಸಂಚಾಲಕರಾದ ರಮೇಶ್ ಎನ್., ಪದವಿ ಕಾಲೇಜಿನ ಪ್ರಾಂಶುಪಾಲರು ಕೃಷ್ಣಪ್ರಸಾದ್ […]

ಶ್ರೀರಾಮ ಪ್ರೌಢಶಾಲೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವ

Sunday, August 15th, 2021
ಶ್ರೀರಾಮ ಪ್ರೌಢಶಾಲೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವ

ಶ್ರೀರಾಮ ಪ್ರೌಢಶಾಲೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ವಿದ್ಯಾಕೇಂದ್ರದ ಸಂಚಾಲಕರಾದ ಶ್ರೀ ವಸಂತ ಮಾಧವ ದ್ವಜಾರೋಹಣಗೈದು, ದಿನದ ವಿಶೇಷತೆ ಬಗ್ಗೆ ಮಾತನಾಡಿದರು. ಸಹಸಂಚಾಲಕರಾದ ಶ್ರೀ ರಮೇಶ್ ಎನ್. ಮುಖ್ಯೋಪಾಧ್ಯಯರು ಶ್ರೀಮತಿ ಶಾಂಭವಿ ಮಾತಾಜಿ, ಶಿಕ್ಷಕರು, ಶಿಕ್ಷಕೇತರರು ಉಪಸ್ಥಿತರಿದ್ದರು.