ಶ್ರೀರಾಮ ಪದವಿ ಕಾಲೇಜಿನಲ್ಲಿ ರಕ್ಷಾಬಂಧನ ಪ್ರದ್ಯೋತ ಸಂಸ್ಕೃತ ಸಂಘ ಉದ್ಘಾಟನೆ
Tuesday, August 28th, 2018ಕಲ್ಲಡ್ಕ, ಆ: 28, ಜಗತ್ತಿನಲ್ಲಿಯೇ ಭಾವನೆಯನ್ನು ತುಂಬಿಕೊಂಡಿರುವ ದೇಶ ಭಾರತ. ನೂರಾರು ಭಾಷೆ ಸಂಸ್ಕೃತಿಗಳಿದ್ದರೂ ಅದರದ್ದೇ ಆದ ವಿಶೇಷತೆಯ ಕಾರಣಕ್ಕೆ ಒಂದು ಬಹು ಸಂಸ್ಕೃತಿಯ ರಾಷ್ಟ್ರವಾಗಿ ಬೆಳೆದಿದೆ. ಶ್ರಾವಣ ಹುಣ್ಣಿಮೆಯ ದಿವಸ ಅಚರಿಸುವ ರಕ್ಷಾಬಂಧನವನ್ನು ಎಲೆ ಮರೆಯ ಕಾುಯಂತೆ ನಮ್ಮ ವಿದ್ಯಾ ಕೇಂದ್ರದ ಸ್ವಚ್ಛತಾ ಸಿಬ್ಬಂದಿ ವರ್ಗದವರೊಂದಿಗೆ ಆಚರಿಸಿಕೊಳ್ಳುತ್ತಿರುವುದು ಅದ್ಭುತವಾದ, ಭಾವನಾತ್ಮಕ ಕಾರ್ಯಕ್ರಮವಷ್ಟೇ ಅಲ್ಲದೇ ಹೊಸ ಕಲ್ಪನೆ ಹಾಗೂ ಯೋಜನೆಯಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. […]